ಕೊಚ್ಚಿ: ರಾಜ್ಯದಲ್ಲಿ 13 ಲಕ್ಷ ಮಂದಿ ಲೈಫ್ ಮಿಷನ್ ವಸತಿ ಯೋಜನೆಯ ಪಟ್ಟಿಯಲ್ಲಿದ್ದಾರೆ. 5,31000 ಜನರಿಗೆ ಮನೆ ನಿರ್ಮಾಣಕ್ಕೆ ಗುತ್ತಿಗೆ ನೀಡಲಾಗಿದೆ.
4,21,795 ಮಂದಿ ಮನೆ ನಿರ್ಮಾಣ ಪೂರ್ಣಗೊಳಿಸಿದ್ದಾರೆ. 1,0,9000 ಮನೆಗಳು ನಿರ್ಮಾಣ ಹಂತದಲ್ಲಿವೆ. ಇನ್ನು 8 ಲಕ್ಷ ಜನರಿಗೆ ಮನೆ ಲಭಿಸಬೇಕಿದೆ. ಉದಯಂಪೇರೂರು ಗ್ರಾ.ಪಂ.ನಲ್ಲಿ ಫಲಾನುಭವಿಗಳ ಸಭೆಯನ್ನು ಉದ್ಘಾಟಿಸಿ ಲೈಫ್ ಮಿಷನ್ ಗೃಹಗಳ ಕೀಲಿ ಕೈ ಹಸ್ತಾಂತರಿಸಿ ಮಾತನಾಡಿದ ಸಚಿವ ಎಂ.ಬಿ.ರಾಜೇಶ್, ಲೈಫ್ ಭವನ ಯೋಜನೆ ಪಟ್ಟಿಯಲ್ಲಿರುವ ಎಲ್ಲ ಜನರಿಗೂ ಮನೆ ನೀಡುವುದು ಸರ್ಕಾರದ ಗುರಿ ಎಂದಿರುವರು.
ಲೈಫ್ ಯೋಜನೆಯಲ್ಲಿ ಇದುವರೆಗೆ 18,080 ಕೋಟಿ ಖರ್ಚು ಮಾಡಲಾಗಿದೆ. ಈ ಪೈಕಿ ಕೇಂದ್ರ ಪಾಲು 2080 ಕೋಟಿ ರೂ. 16,000 ಕೋಟಿಯನ್ನು ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಸಂಸ್ಥೆಗಳು ಭರಿಸುತ್ತವೆ. ಈ ಮೊತ್ತವನ್ನು ರಾಜ್ಯ ಬಜೆಟ್, ಸ್ಥಳೀಯ ಸಂಸ್ಥೆಗಳ ಹಂಚಿಕೆ ಮತ್ತು ಹುಡ್ಕೊ ಸಾಲದಿಂದ ಪಡೆಯಲಾಗಿದೆ.