ಮುಳ್ಳೇರಿಯ: ಗೋಸಾಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಶ್ರೀ ಭೂತಬಲಿ ಉತ್ಸವವು ಡಿ.13ರಿಂದ 16ರ ತನಕ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಗಳ ಕಾರ್ಮಿಕತ್ವದಲ್ಲಿ ಶ್ರೀ ಮಹಿಷಮರ್ದಿನೀ ಅಮ್ಮನವರ ಶ್ರೀ ಭೂತಬಲಿ ಉತ್ಸವ ನಡೆಯಲಿದೆ.
ಇದರಂಗವಾಗಿ ಡಿ.13ರಂದು ರಾತ್ರಿ 7ರಿಂದ ಯಕ್ಷಗಾನ ಬಯಲಾಟ, ರಾತ್ರಿ ಮಹಾಪೂಜೆ, ಅತ್ತಾಳಪೂಜೆ, ಗಣಪತಿ ಪ್ರಾರ್ಥನೆ, ಅನ್ನಸಂತರ್ಪಣೆ, ಡಿ.14ರಂದು ಬೆಳಗ್ಗೆ ಪೂಜೆ, ಗಣಪತಿ ಹವನ, ಪಾವೂರು ದೇವಸ್ಥಾನದಿಂದ ಶ್ರೀ ಧೂಮಾವತಿ ದೈವದ ಭಂಡಾರ ಆಗಮನ, ಕಲಶಾಭಿμÉೀಕ, ತುಲಾಭಾರ ಸೇವೆ, ನಾಗದೇವರಿಗೆ ತಂಬಿಲ, ಭಕ್ತಿಗಾನ ಮೇಳ ನಡೆಯುವುದು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವುದು. ಸಂಜೆ ದೀಪಾರಾಧನೆ, ತಾಯಂಬಕ, ಭಜನೆ, ರಾತ್ರಿ 7ರಿಂದ ಭಕ್ತಿಗಾನ ಸುಧಾ ಕಾರ್ಯಕ್ರಮ, ರಾತ್ರಿ ಪೂಜೆ, ಅನ್ನಸಂತರ್ಪಣೆ, ಶ್ರೀ ಬೂತಬಲಿ ಉತ್ಸವ, ಮಹಾಪೂಜೆ ಪ್ರಸಾದ ವಿತರಣೆ ನಡೆಯುವುದು. ಡಿ.15ರಂದು ಬೆಳಗ್ಗೆ ಪೂಜೆ, ಶ್ರೀಭೂತಬಲಿ ಉತ್ಸವ, ದರ್ಶನ ಬಲಿ, ಬಟ್ಲು ಕಾಣಿಕೆ, ರಾಜಾಂಗಣ ಪ್ರಸಾದ ವಿತರಣೆ, ನವಕಾಭಿμÉೀಕ, ಮಂತ್ರಾಕ್ಷತೆ, ಶ್ರೀ ಧೂಮಾವತಿ ದೈವದ ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿರುವುದು. ರಾತ್ರಿ 7.30ರಿಂದ ಮಲ್ಲಮೂಲೆ ತರವಾಡು ಮನೆಯಿಂದ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ರಾತ್ರಿ ಕಾರ್ತಿಕ ಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯುವುದು. ಡಿ.16ರಂದು ಶ್ರೀ ದೈವಗಳ ಕೋಲ, ಶ್ರೀ ರಕ್ತೇಶ್ವರಿ ದೈವದ ಕೋಲ, ಮಧ್ಯಾಹ್ನ ಶ್ರೀ ವಿಷ್ಣುಮೂರ್ತಿ ದೈವದ ಕೋಲ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆಯೊಂದಿಗೆ ಸಮಾಪ್ತಿಗೊಳ್ಳುವುದು.