ಕೊಲಂಬೊ: ಶ್ರೀಲಂಕಾದ ಜಲಗಡಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದಡಿ ಭಾರತದ 14 ಮೀನುಗಾರರನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ನೌಕಪಡೆ ತಿಳಿಸಿದೆ.
ಮನ್ನಾರ್‌ನ ಕರಾವಳಿಯಲ್ಲಿ ಅಕ್ರಮವಾಗಿ ಮೀನುಗಾರಿಗೆ ಮಾಡುತ್ತಿದ್ದ ಮೀನುಗಾರರು ಮತ್ತು ಎರಡು ದೋಣಿಗಳನ್ನು ನೌಕಾಪಡೆಯು ಬುಧವಾರ ವಶಪಡಿಸಿಕೊಂಡಿದೆ.
ಶ್ರೀಲಂಕಾದ ಸಮುದ್ರ ವ್ಯಾಪ್ತಿಯ ವೆಟ್ಟಿಳೈಕರ್ಣಿಯ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ 18 ಭಾರತೀಯ ಮೀನುಗಾರರನ್ನು ಶ್ರೀಲಂಕಾ ನೌಕಾಪಡೆಯು ಸೋಮವಾರ ಬಂಧಿಸಿತ್ತು.
ಈ ವರ್ಷ ಇದುವರೆಗೆ 529 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಮತ್ತು 68 ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
2023ರಲ್ಲಿ, ಶ್ರೀಲಂಕಾದ ನೌಕಾಪಡೆಯು 240 ಭಾರತೀಯ ಮೀನುಗಾರರನ್ನು ಅಕ್ರಮ ಮೀನುಗಾರಿಕೆ ಆರೋಪದ ಮೇಲೆ ಬಂಧಿಸಿತು.