ಮಧೂರು: ಮಧೂರು ಶ್ರೀಅಯ್ಯಪ್ಪ ಭಜನಾ ಸಮಿತಿ ವತಿಯಿಂದ ಡಿ. 14ರಂದು ಶನಿವಾರ ಪರಕ್ಕಿಲ ಶ್ರೀ ಮಹಾದೇವ ಶಾಸ್ತಾ ವಿನಾಯಕ ದೇವಸ್ಥಾನದಲ್ಲಿ ಶ್ರೀ ಅಯ್ಯಪ್ಪ ಭಜನಾ ಉತ್ಸವ ನಡೆಯಲಿದೆ. ಮುಂಜಾನೆ 5ಕ್ಕೆ ಶರಣುಸ್ತುತಿಯ ಮೂಲಕ ಕಾರ್ಯಕ್ರಮ ಪ್ರಾರಂಭವಾಗಲಿದೆ. ಬಳಿಕ ಗಣಪತಿ ಹೋಮ, ಪೂಜೆ, ಮಧ್ಯಾಹ್ನ ಮಹಾಪೂಜೆ , ಅಯ್ಯಪ್ಪ ಭಿಕ್ಷೆ , ಸಂಜೆ 6 ರಿಂದ ಭಜನೆ, 9 ಕ್ಕೆ ಮಂಗಳಾರತಿ ನಡೆಯಲಿದೆ. ಅಂದು ಮಧ್ಯಾಹ್ನ 12.45 ರಿಂದ ರಾಗಮಾಲಿಕಾ ಮ್ಯೂಸಿಕಲ್ಸ್ ನೆಲ್ಲಿಕಟ್ಟೆ ಸಾದರಪಡಿಸುವ ಶ್ರೀದೇವಿ ಎ ಎಸ್ ಬಳಗದ ಭಕ್ತಿರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.