ಕಾಸರಗೋಡು: ಪೆರಿಯದಲ್ಲಿ ನಡೆದ ಇಬ್ಬರು ಯೂತ್ ಕಾಂಗ್ರೆಸ್ ಕಾರ್ಯಕರ್ತರ ಕೊಲೆ ಪ್ರಕರಣದಲ್ಲಿ 24 ಆರೋಪಿಗಳ ಪೈಕಿ 14 ಮಂದಿ ತಪ್ಪಿತಸ್ಥರು ಎಂದು ಸಿಬಿಐ ನ್ಯಾಯಾಲಯ ಇಂದು ಮಹತ್ತರ ತೀರ್ಪು ನೀಡಿದೆ.
1 ರಿಂದ 8 ಆರೋಪಿಗಳ ಮೇಲೆ ಕೊಲೆ ಮತ್ತು ಪಿತೂರಿ ಆರೋಪ ಹೊರಿಸಲಾಗಿದೆ. 10 ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ.
1ನೇ ಆರೋಪಿ ಪೆರಿಯದ ಸಿಪಿಎಂ ಮಾಜಿ ಸ್ಥಳೀಯ ಸಮಿತಿ ಸದಸ್ಯ ಎ.ಪೀತಾಂಬರನ್, 2ನೇ ಆರೋಪಿ ಪೀತಾಂಬರನ ಸಹಾಯಕ ಹಾಗೂ ಸ್ನೇಹಿತ ಸಿ.ಜೆ.ಸಜಿ, 3ನೇ ಆರೋಪಿ ಕೆ.ಎಂ.ಸುರೇಶ್, 4ನೇ ಆರೋಪಿ ಕೆ.ಅನಿಲ್ ಕುಮಾರ್, 5ನೇ ಆರೋಪಿ ಜಿಜಿನ್, 6ನೇ ಆರೋಪಿ ಶ್ರೀರಾಗ್, 7ನೇ ಆರೋಪಿ ಎ.ಅಶ್ವಿನ್, ಎಂಟನೇ ಆರೋಪಿ ಸುಬಿನ್ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. 10ನೇ ಆರೋಪಿ ಟಿ.ರಂಜಿತ್, 14ನೇ ಆರೋಪಿ ಉದುಮ ಮಾಜಿ ಏರಿಯಾ ಕಾರ್ಯದರ್ಶಿ ಕೆ.ಮಣಿಕಂಠನ್, 15ನೇ ಆರೋಪಿ ವಿಷ್ಣು ಸೂರ, 20ನೇ ಆರೋಪಿ ಉದುಮ ಮಾಜಿ ಶಾಸಕ ಕೆ.ವಿ.ಕುಂಞÂ್ಞ ರಾಮನ್, 21ನೇ ಆರೋಪಿ ರಾಘವನ್ ವೆಲ್ತೋಳಿ, 22ನೇ ಆರೋಪಿ ಕೆ.ವಿ.ಭಾಸ್ಕರನ್ ತಪ್ಪಿತಸ್ಥರೆಂದು ನ್ಯಾಯಾಲಯ ತೀರ್ಪು ನೀಡಿದೆ.
ತೀರ್ಪು ಹೊರಬೀಳುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಬಿಗಿ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕಲ್ಲಿಯೋಟ್ ಪ್ರದೇಶವನ್ನು ಒಳಗೊಂಡಿರುವ ಪೆರಿಯ ಗ್ರಾಮದಲ್ಲಿ ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ನಡೆಯಿತು. ಸಭೆಯಲ್ಲಿ ಪೆರಿಯದಲ್ಲಿ ನಿಷೇಧಾಜ್ಞೆ ಘೋಷಿಸಲು ಜಿಲ್ಲಾಡಳಿತ ನಿನ್ನೆ ನಿರ್ಧರಿಸಿತು, ಆದರೆ ಕಾಂಗ್ರೆಸ್ ನಾಯಕರು ವಿರೋಧಿಸಿದ ನಂತರ ನಿರ್ಧಾರವನ್ನು ಹಿಂಪಡೆಯಲಾಯಿತು.
ಪ್ರಕರಣದಲ್ಲಿ 270 ಸಾಕ್ಷಿಗಳಿದ್ದರು. ಈ ಪ್ರಕರಣದ ತನಿಖೆಯನ್ನು ತಿರುವನಂತಪುರಂನಲ್ಲಿರುವ ಸಿಬಿಐ ಘಟಕ ನಡೆಸಿತ್ತು. ಫೆಬ್ರವರಿ 2, 2023 ರಂದು ಕೊಚ್ಚಿ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆ ಪ್ರಾರಂಭಿಸಿತ್ತು.
ಆರೋಪಿಗಳ ಪಟ್ಟಿಯಲ್ಲಿ ಆರಂಭದಲ್ಲಿ 14 ಮಂದಿ ಇದ್ದರು. ಈ ಪೈಕಿ 11 ಮಂದಿಯನ್ನು ಬಂಧಿಸಲಾಗಿತ್ತು. ನಂತರ ಸಿಬಿಐ ಪ್ರಕರಣವನ್ನು ಕೈಗೆತ್ತಿಕೊಂಡಾಗ ಇನ್ನೂ ಹತ್ತು ಮಂದಿಯನ್ನು ಆರೋಪಿಗಳನ್ನಾಗಿ ಸೇರಿಸಲಾಯಿತು. ಯುವಕನನ್ನು ಕೊಂದ ಘಟನೆಯಲ್ಲಿ ಮೊದಲ ಆರೋಪಿ ಪೀತಾಂಬರನ್ ಹಾಗೂ ಇತರರನ್ನು ಮೊದಲ ಹಂತದಲ್ಲಿ ಬಂಧಿಸಲಾಗಿತ್ತು.
ಸಿಬಿಐ ತನಿಖೆಯು ಆಪಾದಿತ ಪಿತೂರಿಯ ಮೇಲೆ ಕೇಂದ್ರೀಕರಿಸಿದೆ. ಈ ಹಂತದಲ್ಲಿ ಉದುಮ ಮಾಜಿ ಶಾಸಕ ಹಾಗೂ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ವಿ.ಕುಂಞÂ್ಞ ರಾಮನ್ ಆರೋಪಕ್ಕೆ ಗುರಿಯಾದರು. ಕಾಞಂಗಾಡ್ ಬ್ಲಾಕ್ ಪಂಚಾಯತಿ ಅಧ್ಯಕ್ಷ ಕೆ ಮಣಿಕಂಠನ್, ಸಿಪಿಐಎಂ ಮುಖಂಡರಾದ ರಾಘವನ್ ವೆಲ್ತೋಳಿ, ಎನ್ ಬಾಲಕೃಷ್ಣನ್, ಭಾಸ್ಕರನ್ ವೆಲ್ತೋಳಿ ಮತ್ತು ಇತರರು ನಂತರ ಆರೋಪಿಗಳಾದರು.
ಕೊಲೆಯಾದ ಶರತ್ ಲಾಲ್ ಮತ್ತು ಕೃಪೇಶ್ ಪರ ವಾದ ಮಂಡಿಸಿದ ವಕೀಲರು. ನಂತರ ಆರೋಪಿಗಳ ಪರವಾಗಿ ಸಿ.ಕೆ.ಶ್ರೀಧರನ್ (ಡಿಸಿಸಿ ಮಾಜಿ ಅಧ್ಯಕ್ಷ)ಹಾಜರಾಗಿದ್ದು ಪ್ರಕರಣದ ದೂರುದಾರರಿಗೆ ಹಿನ್ನಡೆಯಾಗಿತ್ತು.