ಗುವಾಹಟಿ: ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಡ್ರಗ್ಸ್ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ₹15 ಕೋಟಿ ಮೌಲ್ಯದ 50,000 ಡ್ರಗ್ಸ್ ಮಾತ್ರೆಗಳನ್ನು (ಯಾಬಾ ಮಾತ್ರೆ) ವಶಪಡಿಸಿಕೊಂಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಮಾಹಿತಿ ನೀಡಿರುವ ಅವರು 'ಖಚಿತ ಮಾಹಿತಿ ಮೇರೆಗೆ ಕ್ಯಾಚಾರ್ ಪೊಲೀಸರು ಘೂಂಗೂರ್ ಬೈಪಾಸ್‌ನಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನೆರೆಯ ರಾಜ್ಯದಿಂದ ಡ್ರಗ್ಸ್ ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ತಿಳಿಸಿದರು. ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಯಾಬಾ ಎಂಬುದು ಮೆಟಾಂಫೆಟಮೈನ್ ಮತ್ತು ಕೆಫೇನ್‌ನ ಮಿಶ್ರಣ ಹೊಂದಿದ್ದು, ಉತ್ತೇಜಕ ಮತ್ತು ವ್ಯಸನಕಾರಿ ಮಾತ್ರೆಯಾಗಿದೆ.