ಕಾಸರಗೋಡು: ಪ್ರೆಸ್ ಕ್ಲಬ್ ಕಾಸರಗೋಡು ವತಿಯಿಂದ ಈ ವರ್ಷದ ಕೆ.ಎಂ.ಅಹ್ಮದ್ ಸ್ಮಾರಕ ಮಾಧ್ಯಮ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅತ್ಯುತ್ತಮ ಸುದ್ದಿ ಚಿತ್ರಕ್ಕಾಗಿ ಛಾಯಾಗ್ರಾಹಕರಿಗೆ ಈ ವರ್ಷದ ಪ್ರಶಸ್ತಿಯನ್ನು ನೀಡಲಾಗುವುದು. ಡಿಸೆಂಬರ್ 1, 2023 ಮತ್ತು ನವೆಂಬರ್ 30, 2024 ರ ನಡುವೆ ಪ್ರಕಟವಾದ ಛಾಯಾಚಿತ್ರಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ.ನಮೂದುಗಳನ್ನು ಡಿಸೆಂಬರ್ 10 ರೊಳಗೆ ಞಚಿsಚಿಡಿಚಿgoಜಠಿಡಿessಛಿಟub@gmಚಿiಟ.ಛಿom ಗೆ ಕಳುಹಿಸಿಕೊಡಬೇಕಾಗಿದೆ. ಜೊತೆಗೆ ನಮೂದುಗಳನ್ನು ಕಳುಹಿಸುವ ವ್ಯಕ್ತಿಯ ಫೆÇೀಟೋ ಮತ್ತು ಬಯೋ-ಡೇಟಾವನ್ನು ನ್ಯೂಸ್ ಎಡಿಟರ್ ಯಾ ಬ್ಯೂರೋ ಚೀಫ್ ಪ್ರಮಾಣೀಕರಿಸಿರಬೇಕಾಗಿದೆ. ಪ್ರಶಸ್ತಿ 10ಸವಿರ ರಊ. ನಗದು ಮತ್ತು ಸ್ಮರಣಿಕೆ ಹೊಂದಿದ್ದು, ಡಿ. 16ರಂದು ಕಾಸರಗೋಡು ಪ್ರೆಸ್ ಕ್ಲಬ್‍ನಲ್ಲಿ ನಡೆಯುವ ಕೆ.ಎಂ ಅಹಮ್ಮದ್ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.