ಶಬರಿಮಲೆ: ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿದಾನದಲ್ಲಿ ಮಂಡಲ ಉತ್ಸವ ಆರಂಭಗೊಂಡ ಇದುವರೆಗೆ 17ಲಕ್ಷ ಅಯ್ಯಪ್ಪ ವ್ರತಧಾರಿಗಳು ದರ್ಶನ ಪಡೆದಿದ್ದಾರೆ. ಪಾರಂಪರಿಕ ಕಾನನ ಹಾದಿ ಮೂಲಕ 35ಸವಿರ ಮಂದಿ ಭಕ್ತಾದಿಗಳು ಸನ್ನಿದಾನ ಬಂದು ಸೇರಿದ್ದಾರೆ. ಈ ವರ್ಷದ ಮಂಡಲ ಉತ್ಸವ ಆರಂಭಗೊಂಡ ನಂತರ ಅತ್ಯಂತ ಹೆಚ್ಚಿನ ಅಂದರೆ 89840ಮಂದಿ ಭಕ್ತಾದಿಗಳು ಶುಕ್ರವಾರ ಶ್ರೀದೇವರ ದರ್ಶನ ಪಡೆದಿದ್ದಾರೆ.
ಇವರಲ್ಲಿ 17425ಮಂದಿ ಸ್ಪಾಟ್ ಬುಕ್ಕಿಂಗ್ ಮೂಲಕ ಸನ್ನಿದಾನ ತಲುಪಿದ್ದಾರೆ. ಈ ಮಧ್ಯೆ ಭಕ್ತಾದಿಗಳ ಸಂಖ್ಯೆ ದಿನಕಳೆದಂತೆ ಹೆಚ್ಚಾಗತೊಡಗಿದೆ. ಶುಕ್ರವಾರ ಬೆಳಗ್ಗಿನಿಂದ ಮಧ್ಯಾಹ್ನ ಪೂಜೆ ಕಳೆದು ಗರ್ಭಗುಡಿ ಬಾಗಿಲು ಮುಚ್ಚುವ ಸಂದರ್ಭ 49819ಮಂದಿ ಭಕ್ತಾದಿಗಳು ಶ್ರೀದೇವರ ದರ್ಶನ ಪಡೆದುಕೊಂಡಿದ್ದರು. ಇವರಲ್ಲಿ 9951ಮಂದಿ ಸ್ಪಾಟ್ ಬುಕ್ಕಿಂಗ್ ಮೂಲಕ ಸನ್ನಿದಾನ ತಲುಪಿದ್ದರು. ಮಧ್ಯಾಹ್ನ 3ರಿಂದ ರಾತ್ರಿ 9ರ ಕಾಲಾವಧಿಯಲ್ಲಿ
ಪಂಪೆ ವರೆಗೂ ವಾಹನ ಸಾಗಲು ಅವಕಾಶವಿದ್ದರೂ, ಕಠಿಣ ವ್ರತಾನುಷ್ಠಾನದೊಂದಿಗೆ ಕಾಡಿನ ದುರ್ಗಮ ಹಾದಿಯನ್ನೊಳಗೊಂಡ ಪಾರಂಪರಿಕ ಕಾನನ ಮಾರ್ಗದಲ್ಲಿ ಸಾಗುವವರ ಸಂಖ್ಯೆಯೂ ಹೆಚ್ಚಾಗತೊಡಗಿದೆ. ಪಾರಂಪರಿಕ ಕಾನನ ಹಾದಿಗಳಾದ ಅಳುದಾ-ಕರಿಮಲೆ ಹಾಗೂ ಪಿಲ್ಲುಮೇಡು ಮೂಲಕ ಸಾಗುವ ಭಕ್ತಾದಿಗಳ ಸಂಖ್ಯೆಯಲ್ಲೂ ದಿನಕಳೆದಂತೆ ಹೆಚ್ಚಳವುಂಟಾಗುತ್ತಿದೆ.