ತಿರುವನಂತಪುರಂ: ಆರ್ಯನಾಡು ಬಿವರೇಜಸ್ ಕಾರ್ಪೋರೇಜಸ್ ಮದ್ಯದಂಗಡಿಯಲ್ಲಿ ಭಾರೀ ಕಳ್ಳತನ ನಡೆದಿರುವುದು ವರದಿಯಾಗಿದೆ. 1 ಲಕ್ಷ 30 ಸಾವಿರ ಮೌಲ್ಯದ ಮದ್ಯ ಕಳ್ಳತನವಾಗಿದೆ ಎಂದು ವರದಿಯಾಗಿದೆ.
ಭಾನುವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಎರಡು ಮಂದಿಯಿದ್ದ ತಂಡವೊಂದು ಬಿವರೇಜ್ ಅಂಗಡಿಯ ಶಟರ್ ಬೀಗ ಮುರಿದು ಒಳ ನುಗ್ಗಿದೆ.
ಮುಸುಕುಧಾರಿ ಕಳ್ಳರು ಸಿಸಿಟಿವಿ ಕ್ಯಾಮೆರಾದ ಕೇಬಲ್‍ಗಳನ್ನು ಧ್ವಂಸ ಮಾಡಿದ್ದಾರೆ. ಪೋಲೀಸರು ತನಿಖೆ ಆರಂಭಿಸಿದ್ದಾರೆ.