HEALTH TIPS

2020ರ ಹಾಥರಸ್‌ ಅತ್ಯಾಚಾರ ಸಂತ್ರಸ್ತೆಯ ಕುಟುಂಬ ಭೇಟಿ ಮಾಡಿದ ರಾಹುಲ್

ಹಾಥರಸ್: 2020ರ ಸೆಪ್ಟೆಂಬರ್‌ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪಿದ ದಲಿತ ಯುವತಿಯ ಕುಟುಂಬವನ್ನು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು(ಗುರುವಾರ) ಭೇಟಿ ಮಾಡಿದರು.

ರಾಹುಲ್‌ ಗಾಂಧಿ ಭೇಟಿ ಹಿನ್ನೆಲೆ ಹಾಥರಸ್‌ನ ಚಂದ್ಪಾ ಪ್ರದೇಶದ ಬೂಲ್ ಗರ್ಹಿ ಗ್ರಾಮ ಮತ್ತು ಅದರ ಸುತ್ತಮುತ್ತಲಿನ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

'ದೇಶದ ನೊಂದ ಜನರೊಂದಿಗೆ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರು ಸದಾ ಇರುತ್ತಾರೆ. ಈ ಕುಟುಂಬದೊಂದಿಗೂ ಅವರು ಸಂಪರ್ಕದಲ್ಲಿದ್ದಾರೆ' ಎಂದು ಸ್ಥಳೀಯ ಕಾಂಗ್ರೆಸ್ ನಾಯಕ ಚಂದ್ರಗುಪ್ತ ವಿಕ್ರಮಾದಿತ್ಯಾ ಹೇಳಿದರು.

2020ರ ಅಕ್ಟೋಬರ್ 3ರಂದು ಹಾಥರಸ್‌ನಲ್ಲಿ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಿದ್ದ ರಾಹುಲ್ ಮತ್ತು ಪ್ರಿಯಾಂಕಾ, ಯುವತಿ ಸಾವಿಗೆ ನ್ಯಾಯ ದೊರಕಿಸಿಕೊಳ್ಳಲು ಹೋರಾಡುವುದಾಗಿ ಘೋಷಿಸಿದ್ದರು.

ರಾಹುಲ್ ಭೇಟಿ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, 'ಕೇವಲ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡುತ್ತಾರೆಯೇ ಹೊರತು ಬೇರೆ ಯಾವ ಉದ್ದೇಶವು ಇಲ್ಲ' ಎಂದು ಕಿಡಿಕಾರಿದರು.

ಘಟನೆ ಏನು?

2020 ಸೆಪ್ಟೆಂಬರ್ 14ರಂದು 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಚಿಕಿತ್ಸೆಗಾಗಿ ಆಕೆಯನ್ನು ಮೊದಲು ಅಲಿಗಢ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ದೆಹಲಿಗೆ ಸ್ಥಳಾಂತರಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸೆಪ್ಟೆಂಬರ್ 29 ಆಕೆ ಮೃತಪಟ್ಟಿದ್ದಳು. ಅಕ್ಟೋಬರ್ 30ರ ಮುಂಜಾನೆ ಆಕೆಯ ಅಂತ್ಯಕ್ರಿಯೆ ನಡೆದಿತ್ತು.

'ತರಾತುರಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುವಂತೆ ಪೊಲೀಸರು ಒತ್ತಾಯಿಸಿದ್ದರು' ಎಂದು ಸಂತ್ರಸ್ತೆ ಕುಟುಂಬ ಆರೋಪಿಸಿದ್ದರು. ಇದನ್ನು ಅಲ್ಲಗೆಳೆದಿದ್ದ ಪೊಲೀಸರು, ಕುಟುಂಬದ ಹೇಳಿದಂತೆಯೇ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದಿದ್ದರು.

ಘಟನೆ ಬಗ್ಗೆ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಬೀದಿಗಿಳಿದು ಜನ ಪ್ರತಿಭಟನೆ ನಡೆಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries