ಕುಂಬಳೆ: ಕಳೆದ 5 ವಷರ್Àಗಳಿಂದ ಆನ್‍ಲೈನ್ ಮಾಧ್ಯಮದಲ್ಲಿ ಸಕ್ರಿಯವಾಗಿರುವ ಜಿಲ್ಲೆಯ ಪೋರ್ಟಲ್‍ಗಳಲ್ಲಿ ಒಂದಾದ "ಹಕ್ ನ್ಯೂಸ್" ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾದ "ಹಕ್ ಪುರಸ್ಕಾರ 2024" ಪ್ರದಾನ ಡಿ. 20 ರಂದು ಶುಕ್ರವಾರ ಸಂಜೆ ಆಯೋಜಿಸಲಾಗಿದೆ. . ಸಂಜೆ 4 ಗಂಟೆಗೆ ಬಂದ್ಯೋಡು ಡಿಎಂ ಆಸ್ಪತ್ರೆ ಬಳಿ ಇರುವ "ಜಜ್ಬಾ ಮಿನಿ ಕನ್ವೆನ್ಷನ್ ಹಾಲ್" ನಲ್ಲಿ ಪ್ರಮುಖ ಕೈಗಾರಿಕೋದ್ಯಮಿ ಲತೀಫ್ ಉಪ್ಪಳಗೇಟ್ ಸಮಾರಂಭ ಉದ್ಘಾಟಿಸುವರು.
ಮುಖ್ಯ ಅತಿಥಿಯಾಗಿ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಉಪಸ್ಥಿತರಿರುವರು. ಕ್ರೀಡೆ, ಸಾಮಾಜಿಕ ಉದ್ಯಮ, ಕೃಷಿ, ಆರೋಗ್ಯ, ಶಿಕ್ಷಣ, ಲೋಕೋಪಕಾರ ಮತ್ತು ಜೀವ ಉಳಿಸುವ ಕಾರುಣ್ಯ ಚಟುವಟಿಕೆಗಳ ಕ್ಷೇತ್ರಗಳಿಂದ ಆಯ್ಕೆಯಾದ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ನಿನ್ನೆ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಶೇಷ ತೀರ್ಪುಗಾರರ ತಂಡದಿಂದ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಲಾಗಿದೆ ಎಂದು ಆಯೋಜಕರು ಮಾಹಿತಿ ನೀಡಿದರು.
ಆನ್‍ಲೈನ್ ಮಾಧ್ಯಮವೊಂದು ರಾಷ್ಟ್ರೀಯ ಮಾಧ್ಯಮ ಮಾದರಿಯ ಪ್ರಶಸ್ತಿ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ರಾಜ್ಯದಲ್ಲಿ ಇದೇ ಮೊದಲು. ಸಂಗೀತ ಕಾರ್ಯಕ್ರಮವೂ ನಡೆಯಲಿದೆ.
ಜಿಲ್ಲಾ, ಬ್ಲಾಕ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು, ನಿವೃತ್ತ ಹೆಚ್ಚುವರಿ ಎಸ್ಪಿ, ಮಾಧ್ಯಮದವರು, ಉದ್ಯಮ ಮತ್ತು ವಾಣಿಜ್ಯ ಮುಖಂಡರು, ಸಾಮಾಜಿಕ ಮತ್ತು ಸಾಂಸ್ಕøತಿಕ ಮುಖಂಡರು ಮತ್ತು ವಿವಿಧ ಕ್ಲಬ್ ಪದಾಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಹಕ್ ನ್ಯೂಸ್ ಸಂಚಾಲಕ ಝೈನುದ್ದೀನ್ ಅಡ್ಕ, ಹಕ್ ನ್ಯೂಸ್ ಸಂಚಾಲಕ ಝಡ್.ಎ ಮೊಗ್ರಾಲ್, ಕೋಶಾಧಿಕಾರಿ ಮಹ್ಮದ್ ಕೈಕಂಬ, ಅಬ್ದುಲ್ಲಾ ಬಿ.ಎಂ.ಪಿ., ಸಿದ್ದೀಕ್ ಕೈಕಂಬ, ಅಶಫ್ ಉಪ್ಪಳ, ಶಿಹಾಬ್ ಗುರ್ಮಾ ಮತ್ತು ರೈಶಾದ್ ಉಪ್ಪಳ ಉಪಸ್ಥಿತರಿದ್ದರು.