ಕಾಸರಗೋಡು: ಜನಸಾಗರವನ್ನು ತನ್ನದಾಗಿಸಿಕೊಂಡು ಯಶಸ್ಸಿಗೆ ಕಾರಣವಾಗಿರುವ 'ಬೇಕಲ ಬೀಚ್ ಉತ್ಸವ' ಡಿಸೆಂಬರ್ 21 ರಿಂದ 31 ರವರೆಗೆ ಬೇಕಲ ಬೀಚ್ ಪಾರ್ಕ್ ಮತ್ತು ರೆಡ್‍ಮೂನ್ ಬೀಚ್ ಪಾರ್ಕ್‍ನಲ್ಲಿ ಜರುಗಲಿದೆ. ಬೇಕಲ್ ರೆಸಾರ್ಟ್ ಅಭಿವೃದ್ಧಿ ನಿಗಮ(ಬಿಆರ್‍ಡಿಸಿ)ದ ಜಂಟಿ ಸಹಕಾರದೊಂದಿಗೆ ಬೀಚ್ ಕಾರ್ನೀವಲ್ ಆಯೋಜಿಸಲಾಗುವುದು ಎಂದು ಬೇಕಲ ಬೀಚ್ ಪಾರ್ಕ್ ನಿರ್ದೇಶಕ ಅನಸ್ ಮುಸ್ತಫಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 23 ಎಕರೆ ವಿಸ್ತೀರ್ಣದಲ್ಲಿರುವ ಬಿಆರ್‍ಡಿಸಿ ಬೀಚ್ ಪಾರ್ಕ್ ಮತ್ತು ಸುತ್ತಮುತ್ತಲಿನ ಖಾಸಗಿ ಭೂಮಿಯನ್ನು ಕಾರ್ನೀವಲ್ ಮತ್ತು ಪಾಕಿರ್ಂಗ್‍ಗಾಗಿ ಸ್ಥಳ ಮೀಸಲಿರಿಸಲಾಗಿದೆ. ಡಿಸೆಂಬರ್ 15 ರಂದು ಪ್ರವಾಸೋದ್ಯಮ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಮಹಮ್ಮದ್ ರಿಯಾಸ್ ಬೀಚ್ ಕಾರ್ನಿವಲ್ ಜ್ಯೋತಿ ಬೆಳಗಿಸುವರು.
30,000 ಚದರ ಅಡಿ ವಿಸ್ತೀರ್ಣದ ಈವೆಂಟ್‍ನಲ್ಲಿ 11 ದಿನಗಳ ವೇದಿಕೆ ಕಾರ್ಯಕ್ರಮಗಳಲ್ಲಿ ಪ್ರಸಿದ್ಧ ಗಾಯಕರು ಮತ್ತು ನೃತ್ಯಗಾರರನ್ನು ಒಳಗೊಂಡ ಸಾಂಸ್ಕøತಿಕ ಕಾರ್ಯಕ್ರಮ, ಕಾರ್ನೀವಲ್ ಅಲಂಕಾರಗಳು, ಬೀದಿ ಪ್ರದರ್ಶನ, ಪೆಟ್ ಫಾಸ್ಟ್, 30 ಒಳಾಂಗಣ ಆಟದ ಆರ್ಕೇಡ್ ಆಟಗಳು, ಜೋಡಿ ಸ್ವಿಂಗ್, ಸ್ಕೈ ಸೈಕ್ಲಿಂಗ್, ವಾಲ್ ಕ್ಲೈಂಬಿಂಗ್, ಜಿಪ್ ಲೈನ್, ಸ್ಪೀಡ್ ಬೋಟ್, ತೇಲುವ ಸೇತುವೆ, ಫುಡ್ ಕೋರ್ಟ್, ಪುರಾತನ ವಸ್ತುಗಳು ಮತ್ತು ಮಿಲಿಟರಿ ಉಪಕರಣಗಳ ಪ್ರದರ್ಶನ, ಸ್ಟುಡಿಯೋ, ಅಮ್ಯೂಸ್‍ಮೆಂಟ್ಸ್, ಆಟೋ ಎಕ್ಸ್‍ಪೆÇೀ, ಫುಡ್ ಸ್ಟ್ರೀಟ್‍ಶಾಪಿಂಗ್ ಬೇಕಲ್ ಬೀಚ್ ಕಾರ್ನಿವಲ್ ರಂಗೇರಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರೆಡ್ ಮೂನ್ ಬೀಚ್ ವ್ಯವಸ್ಥಾಪಕ ನಿರ್ದೇಶಕ ಶಿವದಾಸ್ ಕೀನೇರಿ, ಬೇಕಲ ಬೀಚ್ ಕಾರ್ನಿವಲ್ ಕಾರ್ಯಕ್ರಮದ ಸಂಯೋಜಕ ಸೈಫುದ್ದೀನ್ ಕಳನಾಡ್ ಉಪಸ್ಥಿತರಿದ್ದರು.