ಪೆರ್ಲ: ಸ್ವರ್ಗದ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ಡಿ.21ರಿಂದ ಡಿ.28ರವರೆಗೆ ನಡೆಯಲಿರುವ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ 2024-2025 ವರ್ಷದ ಏಳು ದಿನಗಳ ಎನ್ನೆಸ್ಸೆಸ್ ಶಿಬಿರವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶುಕ್ರವಾರ ಸಂಜೆ ಸ್ವರ್ಗ ಶಾಲೆಯಲ್ಲಿ ಸ್ವಾಗತ ಸಮಿತಿ ರಚಿಸಲಾಯಿತು.
ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಬಿರಕ್ಕೆ ಎಲ್ಲ ರೀತಿಯಲ್ಲೂ ಸಹಕರಿಸುವ ಭರವಸೆ ನೀಡಿದರು. ಕಾಟುಕುಕ್ಕೆ ಶಾಲೆ ಸಂಚಾಲಕ ಮಿತ್ತೂರು ಪುರುμÉೂೀತ್ತಮ ಭಟ್ ಅಧ್ಯಕ್ಷತೆ ವಹಿಸಿದ್ದರು.ಕಾಟುಕುಕ್ಕೆ ಹೈಯರ್ ಸೆಕೆಂಡರಿ ಶಾಲೆ ಪ್ರಾಂಶುಪಾಲ ಪದ್ಮನಾಭ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಸ್ವರ್ಗ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಕೆ.ವೈ. ಸುಬ್ರಹ್ಮಣ್ಯ ಭಟ್, ಸ್ವರ್ಗ ಶಾಲೆಯ ಪಿಟಿಎ ಅಧ್ಯಕ್ಷ ಕಾರ್ತಿಕ್ ಶಾಸ್ತ್ರಿ, ಕಾಟುಕುಕ್ಕೆ ಶಾಲೆಯ ಪಿಟಿಎ ಅಧ್ಯಕ್ಷ ಸುಧಾಕರ್ ಕಲ್ಲಗದ್ದೆ ಮಾತನಾಡಿದರು. ಶಿಕ್ಷಕ ಸಂದೀಪ್ ಶಿಬಿರದ ರೂಪುರೇಷೆ ಕುರಿತು ವಿವರಿಸಿದರು. ಸ್ವರ್ಗ ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್., ಮಾತೃಮಂಡಳಿ ಅಧ್ಯಕ್ಷೆ ಗಾಯತ್ರಿ ಉಪಸ್ಥಿತರಿದ್ದರು.
ಸ್ವರ್ಗ ಶಾಲಾ ಮುಖ್ಯ ಶಿಕ್ಷಕಿ ಗೀತಾ ಕುಮಾರಿ ಬಿ. ಸ್ವಾಗತಿಸಿ, ಎನ್ನೆಸ್ಸೆಸ್ ಕಾರ್ಯಕ್ರಮ ಯೋಜನಾಧಿಕಾರಿ ವಾಣಿ ಕೆ.ನಿರೂಪಿಸಿದರು. ಸ್ವರ್ಗ ಶಾಲೆಯ ಹಿರಿಯ ಶಿಕ್ಷಕ ವಿದ್ಯಾಸಾಗರ್ ವಂದಿಸಿದರು.
ಸಮಿತಿ ರಚನೆ:
ಎನ್ನೆಸ್ಸೆಸ್ ಶಿಬಿರದ ಅಧ್ಯಕ್ಷರಾಗಿ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಕಾರ್ಯಕಾರಿ ಸಮಿತಿ ಅಧ್ಯಕ್ಷರಾಗಿ ಕೆ.ವೈ.ಸುಬ್ರಹ್ಮಣ್ಯ ಭಟ್, ಕಾರ್ಯಕ್ರಮ ಸಮಿತಿ ಅಧ್ಯಕ್ಷರಾಗಿ ರಾಮಚಂದ್ರ ಎಂ., ಸಂಚಾಲಕರಾಗಿ ಸಚ್ಚಿದಾನಂದ ಎಸ್., ಆರ್ಥಿಕ ಸಮಿತಿ ಅಧ್ಯಕ್ಷರಾಗಿ ಶಿವರಾಮ ಭಟ್ ಪಡ್ಪು, ಸಂಚಾಲಕರಾಗಿ ಮಿಥುನ್ ವಿ.ಆರ್., ಆಹಾರ ಸಮಿತಿ ಅಧ್ಯಕ್ಷರಾಗಿ ಕಾರ್ತಿಕ್ ಶಾಸ್ತ್ರಿ, ಸಂಚಾಲಕರಾಗಿ ಕಲಾವತಿ, ಸಾರ್ವಜನಿಕ ಸಂಪರ್ಕ(ಮಾಧ್ಯಮ) ಸಮಿತಿ ಅಧ್ಯಕ್ಷರಾಗಿ ಅಜಿತ್ ಸ್ವರ್ಗ, ಸಂಚಾಲಕರಾಗಿ ರವಿ ವಾಣೀನಗರ, ಸ್ವಾಗತ ಸಮಿತಿ ಅಧ್ಯಕ್ಷರಾಗಿ ಹೃಷಿಕೇಶ ವಿ.ಎಸ್., ಸಂಚಾಲಕರಾಗಿ ಗೀತಾ ಕುಮಾರಿ ಆಯ್ಕೆಯಾದರು. ವಿವಿಧ ಉಪ ಸಮಿತಿಗಳನ್ನು ರಚಿಸಿ ಪದಾಧಿಕಾರಿಗಳು, ಸದಸ್ಯರನ್ನು ಆಯ್ಕೆ ಮಾಡಲಾಯಿತು.