ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ಎನ್ನೆಸ್ಸೆಸ್ ಶಿಬಿರ "ದಶ ದಿಶ" ಡಿ.21ರಿಂದ 27ರ ತನಕ ಸ್ವರ್ಗ ಸ್ವಾಮಿ ವಿವೇಕಾನಂದ ಎಯುಪಿ ಶಾಲೆಯಲ್ಲಿ ನಡೆಯಲಿದೆ.
ಡಿ.21ರಂದು ಬೆಳಗ್ಗೆ 9ರಿಂದ ಶಿಬಿರಾರ್ಥಿಗಳ ನೋಂದಣಿ ನಡೆಯಲಿದೆ. 9.30ಕ್ಕೆ ಸ್ವರ್ಗ ಶಾಲಾ ಮುಖ್ಯ ಶಿಕ್ಷಕಿ ಗೀತಾಕುಮಾರಿ ಬಿ.ಧ್ವಜಾರೋಹಣ ನೆರವೇರಿಸಿ ಶಿಬಿರಕ್ಕೆ ಚಾಲನೆ ನೀಡುವರು.
10.30ಕ್ಕೆ ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್. ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಕಾಟುಕುಕ್ಕೆ ಶಾಲಾ ವ್ಯವಸ್ಥಾಪಕ ಮಿತ್ತೂರು ಪುರುμÉೂೀತ್ತಮ ಭಟ್ ಅಧ್ಯಕ್ಷತೆ ವಹಿಸುವರು. ಸ್ವರ್ಗ ವಾರ್ಡ್ ಸದಸ್ಯ ರಾಮಚಂದ್ರ ಎಂ. ಮುಖ್ಯ ಅತಿಥಿಯಾಗಿ ಭಾಗವಹಿಸುವರು.
ಕಾಸರಗೋಡು ಜಿ.ಪಂ.ಸದಸ್ಯ ನಾರಾಯಣ ನಾಯ್ಕ್, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಎಣ್ಮಕಜೆ ಗ್ರಾಪಂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್. ಗಾಂಭೀರ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಎ.ಕುಲಾಲ್, ಜನಪ್ರತಿನಿಧಿಗಳು, ಎನ್ನೆಸ್ಸೆಸ್ ಜಿಲ್ಲಾ ಸಂಯೋಜಕ ಮನೋಜ್ ಕುಮಾರ್, ಪಿಎಸಿ ಸದಸ್ಯ ಶ್ರೀನಾಥ್ ಇ., ಸ್ವರ್ಗ ಶಾಲಾ ವ್ಯವಸ್ಥಾಪಕ ಹೃಷಿಕೇಶ ವಿ.ಎಸ್., ಕಾಟುಕುಕ್ಕೆ ಶಾಲೆ ಪ್ರಿನ್ಸಿಪಾಲ್ ಪದ್ಮನಾಭ ಶೆಟ್ಟಿ, ಮುಖ್ಯ ಶಿಕ್ಷಕ ಹರಿಪ್ರಸಾದ್ ಶೆಟ್ಟಿ, ಎನ್ನೆಸ್ಸೆಸ್ ಸಂಯೋಜಕಿ ವಾಣಿ ಕೆ., ಶಾಲಾ ಪಿಟಿಎ, ಸಿಬ್ಬಂದಿಗಳು ಉಪಸ್ಥಿತರಿರುವರು.
ಮಧ್ಯಾಹ್ನ 12ಕ್ಕೆ ಶಿಬಿರದ ವಿವರಣೆ, 2ರಿಂದ "ಬಾಂಡಿಂಗ್ ಟೈಮ್" ಸಂವಾದ, ಸಂಜೆ 6.30ಕ್ಕೆ "ಬಿಯೋಂಡ್ ದಿ ಕರ್ಟೈನ್", ರಾತ್ರಿ ಶಿಬಿರದ ಅವಲೋಕನ, ಡಿ.22ರಂದು ಬೆಳಗ್ಗೆ 9.30ಕ್ಕೆ "ಸುಕೃತ ಕೇರಳಂ" ಪ್ರಾಜೆಕ್ಟ್ ವರ್ಕ್, ಮಧ್ಯಾಹ್ನ 2ರಿಂದ ಲೀಡರ್ ಶಿಪ್ ಆಂಡ್ ಗ್ರೂಪ್ ಡೈನಮಿಕ್ಸ್ ಕಾರ್ಯಾಗಾರ, ಸಂಜೆ 6ರಿಂದ ಸತ್ಯಮೇವ ಜಯತೆ” ಕಾರ್ಯಕ್ರಮ ನಡೆಯಲಿದೆ.
ಡಿ.23ರಂದು ಬೆಳಗ್ಗೆ 9.30ರಿಂದ "ಸ್ನೇಹ ಸಂದರ್ಶನಂ", 11.30ರಿಂದ “ಹರಿತ ಸಮೃದ್ಧಿ”, ಮಧ್ಯಾಹ್ನ 2ರಿಂದ “ಸಮದರ್ಶನ್”, ಸಂಜೆ 6ಕ್ಕೆ ಸಿಂಫನಿ, ಡಿ.24ರಂದು ಬೆಳಗ್ಗೆ 9.30ರಿಂದ "ಅಪ್ ಸೈಕ್ಲಿಂಗ್", ಮಧ್ಯಾಹ್ನ 2ರಿಂದ “ಸುಸ್ಥಿರ ಜೀವನ ಶೈಲಿ” ಕಾರ್ಯಾಗಾರ, ಡಿ.25ರಂದು ಕ್ರಿಸ್ಮಸ್ ಆಚರಣೆ ನಡೆಯಲಿದೆ.
ಡಿ.26ರಂದು ಬೆಳಗ್ಗೆ 9.30ರಿಂದ “ಪುಸ್ತಕ ಪಯಟ್ಟ್”, 11ರಿಂದ “ಕೂಟ್ಟು ಕೂಡಿ ನಾಡು ಕಾಕ್ಕಾಂ”, ಮಧ್ಯಾಹ್ನ 2ರಿಂದ "ಅಮ್ಮಯೆ ಅರಿಯಾನ್", ಸಂಜೆ 6ರಿಂದ ಜಲ ಸಂರಕ್ಷಣೆ ತರಗತಿ, ರಾತ್ರಿ 8ರಿಂದ ಸಾಂಸ್ಕøತಿಕ ಕಾರ್ಯಕ್ರಮ, ಡಿ.27ರಂದು ಬೆಳಗ್ಗೆ 10ರಿಂದ "ಎಫೆಕ್ಟಿವ್ ಪಬ್ಲಿಕ್ ಸ್ಪೀಕಿಂಗ್", 11ರಿಂದ "ಡಿಜಿಟಲ್ ಸಾಕ್ಷರತೆ ಮತ್ತು ಡಿಜಿಟಲ್ ನೈರ್ಮಲ್ಯ" ಕಾರ್ಯಾಗಾರ, ಮಧ್ಯಾಹ್ನ 2ರಿಂದ ಸಮಾರೋಪ ಸಮಾರಂಭ ನಡೆಯಲಿದೆ.