ಕೊಲಂಬೊ: ಇಲ್ಲಿನ ಈಶಾನ್ಯ ಕರಾವಳಿಯ ಸಮುದ್ರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ 25 ಮಕ್ಕಳು ಸೇರಿದಂತೆ 100ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿದೆ.
ಮುಲ್ಲೈತೀವು ಜಿಲ್ಲೆಯ ವೆಲ್ಲಮುಳ್ಳಿವೈಕ್ಕಲ್ ಪ್ರದೇಶದಲ್ಲಿ ಗುರುವಾರ ಸ್ಥಳೀಯ ಮೀನುಗಾರರು ಅವರನ್ನು ಪತ್ತೆ ಮಾಡಿದ್ದರು.
ಮೀನುಗಾರಿಕಾ ಹಡಗಿನಲ್ಲಿದ್ದ 25 ಮಕ್ಕಳು ಹಾಗೂ 40 ಮಹಿಳೆಯರು ಸೇರಿದಂತೆ ಒಟ್ಟು 102 ಜನರನ್ನು ರಕ್ಷಿಸಲಾಗಿದೆ. ಸಂಕಷ್ಟಕ್ಕೆ ಕಾರಣ ಹಾಗೂ ಅವರು ಎಲ್ಲಿಗೆ ಹೋಗುತ್ತಿದ್ದರು ಎಂಬುವುದು ಇನ್ನೂ ತಿಳಿದಿಲ್ಲ ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.
ಸದ್ಯ ಅವರನ್ನು ಟ್ರಿಂಕೋಮಲಿಯ ಬಂದರಿಗೆ ಕರೆತರಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
2022ರ ಡಿಸೆಂಬರ್‌ನಲ್ಲಿ ನೀರಿನಲ್ಲಿ ಮುಳಗುತ್ತಿದ್ದ 100ಕ್ಕೂ ಹೆಚ್ಚು ರೋಹಿಂಗ್ಯಾಗಳನ್ನು ಶ್ರೀಲಂಕಾ ನೌಕಾಪಡೆ ರಕ್ಷಿಸಿತ್ತು. ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ನೆರವಿನಿಂದ ಅವರನ್ನು ಸ್ವದೇಶಕ್ಕೆ ಕಳುಹಿಸಲಾಗಿತ್ತು.