HEALTH TIPS

ಜನವರಿ 25, 2025ರಂದು ಆಕಾಶದಲ್ಲಿ ನಡೆಯಲಿದೆ ಖಗೋಳ ವಿಸ್ಮಯ! ಒಟ್ಟಿಗೆ ಕಾಣಿಸಿಕೊಳ್ಳಲಿವೆ ಗ್ರಹಗಳು, ಏನಿದರ ಸೂಚನೆ?

2025ರ ಹೊಸ ವರ್ಷದಲ್ಲಿ ಆಕಾಶದಲ್ಲಿ ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವ ಅಪರೂಪದ ಖಗೋಳ ವಿಸ್ಮಯ ನಡೆಯಲಿದೆ. ಜನವರಿ 25ರಂದು ರಾತ್ರಿ ಈ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು.

2025ರ ಹೊಸ ವರ್ಷದಲ್ಲಿ ಆಕಾಶದಲ್ಲಿ ಗ್ರಹಗಳು ಒಟ್ಟಿಗೆ ಕಾಣಿಸಿಕೊಳ್ಳುವ ಅಪರೂಪದ ಖಗೋಳ ಘಟನೆ ನಡೆಯಲಿದೆ.

ಜನವರಿ 25ರಂದು ರಾತ್ರಿ ಈ ಅದ್ಭುತ ನೋಟವನ್ನು ಕಣ್ತುಂಬಿಕೊಳ್ಳಬಹುದು. ಸೌರಮಂಡಲದ ಹಲವು ಗ್ರಹಗಳು ಸಾಲಾಗಿ ನಿಂತಂತೆ ಭಾಸವಾಗುವ ಈ ರಚನೆ, ಬಾಹ್ಯಾಕಾಶ ಪ್ರಿಯರಿಗೆ ಹಬ್ಬವಾಗಲಿದೆ.

ಅಪರೂಪದ ಘಟನೆಯಲ್ಲಿ ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿ ಗ್ರಹಗಳು ಆಕಾಶದ ಒಂದೇ ಭಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಆದರೆ, ಒಂದೇ ನೇರ ಸಾಲಿನಲ್ಲಿ ಇರುವುದಿಲ್ಲ. ಈ ರಚನೆಯು ಆಕಾಶದಲ್ಲಿ ಗ್ರಹಗಳು ನರ್ತಿಸುವಂತೆ ಒಂದು ಸುಂದರ ಭ್ರಮೆಯನ್ನು ಉಂಟುಮಾಡುತ್ತದೆ.

ಹೀಗೆ ಹಲವು ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಅಪರೂಪ. ಜ್ಯೋತಿಷ್ಯದ ಪ್ರಕಾರ ಈ ಖಗೋಳ ಘಟನೆ ಮಹತ್ವದ ಬದಲಾವಣೆಗಳನ್ನು ಸೂಚಿಸುತ್ತದೆ ಎನ್ನಲಾಗಿದೆ. ಹಾಗಾಗಿ ಇದಕ್ಕೆ ಹೆಚ್ಚಿನ ಮಹತ್ವ.

ಜ್ಯೋತಿಷ್ಯ ಶಾಸ್ತ್ರವು ಇಂತಹ ಅಪರೂಪದ ಗ್ರಹ ಸಾಲು ಬರುವುದನ್ನು ಗ್ರಹಗಳ ಶಕ್ತಿ ಹೆಚ್ಚಳ ಎಂದು ಪರಿಗಣಿಸುತ್ತದೆ. ಸಂವಹನದ ಗ್ರಹ ಬುಧವು ಆಳವಾದ ಸಂಭಾಷಣೆಗಳನ್ನು ಪ್ರೇರೇಪಿಸಬಹುದು. ಪ್ರಕಾಶಮಾನವಾದ ಶುಕ್ರ ಪ್ರೀತಿ ಮತ್ತು ಸೌಂದರ್ಯವನ್ನು ಸೂಚಿಸುತ್ತದೆ. ಮಂಗಳ ಉತ್ಸಾಹ ಮತ್ತು ಉದ್ವೇಗವನ್ನು ಸೂಚಿಸುತ್ತದೆ. ಗುರು ಜ್ಞಾನವನ್ನು ನೀಡುತ್ತದೆ. ಶನಿ ಶಿಸ್ತನ್ನು ನೀಡುತ್ತದೆ.

ವಿಜ್ಞಾನದ ಪ್ರಕಾರ, ಗ್ರಹಗಳ ವಿಭಿನ್ನ ಪರಿಭ್ರಮಣ ಅವಧಿಗಳಿಂದಾಗಿ ಇಂತಹ ಸಾಲುಗಳು ಉಂಟಾಗುತ್ತವೆ. ಭೂಮಿಯಿಂದ ಈ ಘಟನೆಗಳನ್ನು ವಿರಳವಾಗಿ ಮಾತ್ರ ನೋಡಬಹುದು. 2025ರ ಜನವರಿಯಲ್ಲಿ ನಡೆಯುವ ಗ್ರಹಗಳ ಸಾಲು ವಿಶೇಷವಾದದ್ದು. ಇದನ್ನು ಬರಿಗಣ್ಣಿನಿಂದಲೇ ನೋಡಬಹುದು. ದೂರದರ್ಶಕದಿಂದ ನೋಡಿದರೆ ಇನ್ನಷ್ಟು ಸ್ಪಷ್ಟವಾಗಿ ಕಾಣುತ್ತದೆ.

ಸಂಜೆ ಆಕಾಶದ ಅಲಂಕಾರ:

ಸೂರ್ಯಾಸ್ತದ ನಂತರ ಈ ಅಪರೂಪದ ಖಗೋಳ ಘಟನೆಯನ್ನು ವೀಕ್ಷಿಸಬಹುದು. ಸಂಜೆ ಆಕಾಶದಲ್ಲಿ ಗ್ರಹಗಳು ಆಕಾಶಕ್ಕೆ ರತ್ನಗಳನ್ನು ಜೋಡಿಸಿದಂತೆ ಕಾಣುತ್ತವೆ. ಶುಕ್ರ ಮತ್ತು ಗುರು ಅತ್ಯಂತ ಪ್ರಕಾಶಮಾನವಾಗಿ ಕಾಣಿಸುತ್ತವೆ. ಮಂಗಳ ಗ್ರಹವು ವಿಶಿಷ್ಟವಾದ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಜನವರಿ ೨೫ರಂದು ನಡೆಯುವ ಈ ಅಪರೂಪದ ಘಟನೆಯನ್ನು ಖಗೋಳ ಆಸಕ್ತರು ತಪ್ಪಿಸಿಕೊಳ್ಳಬಾರದು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries