ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ ಹಾಗೂ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಡಿ.24ರಿಂದ ಡಿ.26ರ ತನಕ ಜರಗಲಿರುವುದು.
ಕಾರ್ಯಕ್ರಮಗಳು :
ಡಿ.24 ಮಂಗಳವಾರ ಪೂರ್ವಾಹ್ನ ಶರಣಂ ವಿಳಿ, 5 ರಿಂದ ಭಜನೆ, 7.30ಕ್ಕೆ ಗುಳಿಗ ಸನ್ನಿಧಿಯಲ್ಲಿ ಪ್ರಾರ್ಥನೆ, 9 ಕ್ಕೆ ಪೆರಡಾಲ ಶ್ರೀ ಉದನೇಶ್ವರ ಸನ್ನಿಧಿಯಿಂದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡುವುದು, ಮಧ್ಯಾಹ್ನ 12.30ಕ್ಕೆ ಉಗ್ರಾಣ ತುಂಬಿಸುವುದು. ಸಂಜೆ 5 ಕ್ಕೆ ವೇದಮೂರ್ತಿ ಬ್ರಹ್ಮಶ್ರೀ ಗಣೇಶ್ ಭಟ್ ಮುಂಡೋಡು ಅವರ ಆಗಮನ, 6.30ಕ್ಕೆ ಶ್ರೀ ಅಯ್ಯಪ್ಪ ಭಜನಾ ಸಂಘ ಶಬರಿಗಿರಿ ಬದಿಯಡ್ಕ ಇವರಿಂದ ಭಜನೆ, ರಾತ್ರಿ 7ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ಅಸ್ತ್ರಕಲಶ ಪೂಜೆ, ವಾಸ್ತುಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಃ, ವಾಸ್ತು ಬಲಿ, ಸ್ಥಳ ಶುದ್ಧಿ, ಅನ್ನದಾನ ನಡೆಯಲಿದೆ. ಡಿ.25ರಂದು ಪೂರ್ವಾಹ್ನ ಭಜನೆ, 8 ಕ್ಕೆ 24 ತೆಂಗಿನ ಕಾಯಿಯ ಮಹಾಗಣಪತಿ ಹೋಮ, 9.30ರಿಂದ ಭಜನೆ, 10 ಕ್ಕೆ ಶನೈಶ್ಚರಪೂಜೆ ಆರಂಭ, 11ರಿಂದ 11.30ರ ಒಳಗೆ ಕುಂಭಲಗ್ನ ಶುಭ ಮುಹೂರ್ತದಲ್ಲಿ ಗುರುಸ್ವಾಮಿ ರಮೇಶ್ ಆಳ್ವ ಮತ್ತು ಶಿಷ್ಯವೃಂದದವರಿಂದ ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠೆ, 12 ಕ್ಕೆ ಶರಣಂ ವಿಳಿ, ಮಹಾಮಂಗಳಾರತಿ, ಅನ್ನಪ್ರಸಾದ, ಮಧ್ಯಾಹ್ನ 1.30ಕ್ಕೆ ಸತ್ಸಂಗ, ಅಪರಾಹ್ನ 2.30ಕ್ಕೆ ಶ್ರೀಮದ್.ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಆಗಮನ, ಪೂರ್ಣಕುಂಭ ಸ್ವಾಗತ. 3 ಕ್ಕೆ ಧಾರ್ಮಿಕ ಸಭೆಯನ್ನು ಶ್ರೀಗಳು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಮಾನಾಥ ರೈ ಮೇಗಿನ ಕಡಾರು ಅಧ್ಯಕ್ಷತೆ ವಹಿಸುವರು. ಧಾರ್ಮಿಕ ಮುಂದಾಳು ಗೋಪಾಲಕೃಷ್ಣ ಪೈ ಬದಿಯಡ್ಕ, ನಿವೃತ್ತ ಮುಖ್ಯೋಪಾಧ್ಯಾಯ ಬಿ.ಎಸ್.ಭಾಸ್ಕರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರವೀಣ್ ಕುಮಾರ್ ಕೋಡೋತ್ ಧಾರ್ಮಿಕ ಭಾಷಣ ಮಾಡಲಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಂಯೋಜನಾಧಿಕಾರಿ ಮುಖೇಶ್ ಕುಮಾರ್, ಗ್ರೀನ್ ಹೀರೋ ಓಫ್ ಇಂಡಿಯದ ಡಾ. ಆರ್.ಕೆ.ನಾಯರ್ ಗುಜರಾತ್, ಗುರುಸ್ವಾಮಿಗಳಾದ ರಮೇಶ್ ಆಳ್ವ ಕಡಾರು, ಕೃಷ್ಣ, ರಮೇಶ್, ಕುಂಞÂಕಣ್ಣ ಮಣಿಯಾಣಿ, ಜನಪ್ರತಿನಿಧಿಗಳಾದ ಬಾಲಕೃಷ್ಣ ಶೆಟ್ಟಿ ಮೇಗಿನ ಕಡಾರು, ಶುಭಲತಾ ರೈ ಕಡಾರು ಬೀಡು, ಸೇವಾಸಮಿತಿಯ ಅಧ್ಯಕ್ಷ ಪ್ರಭಾಕರ ರೈ ಮೇಗಿನಕಡಾರು, ಮಹಿಳಾಸಮಿತಿ ಅಧ್ಯಕ್ಷೆ ಪ್ರವೀಣ ಕುಮಾರಿ, ನಿವೃತ್ತ ಪ್ರಾಂಶುಪಾಲ ಡಾ. ಶಂಕರ ಪಾಟಾಳಿ ಶುಭಾಶಂಸನೆಗೈಯುವರು. ಸಂಜೆ 6 ಕ್ಕೆ ಬೊಳ್ಳೂರು ಶ್ರೀ ಸದಾಶಿವ ದೇವಸ್ಥಾನದಿಂದ ಪಾಲೆಕೊಂಬು ಮೆರವಣಿಗೆ ಕುಣಿತ ಭಜನೆಯೊಂದಿಗೆ ಹೊರಡುವುದು, 7 ಕ್ಕೆ ರಾಗಸಂಗಮ ವಿದ್ಯಾಗಿರಿ ಇವರಿಂದ ಭಕ್ತಿಗಾನಸುಧೆ, ಅನ್ನಪ್ರಸಾದ, 9ರಿಂದ ಯಕ್ಷಗಾನ ಬಯಲಾಟ ಭಸ್ಮಾಸುರ ಮೋಹಿನಿ ಶಬರಿಮಲೆ ಅಯ್ಯಪ್ಪ, 10ಕ್ಕೆ ಪಾಲೆಕೊಂಬು ಮೆರವಣಿಗೆ ಮಂದಿರದ ಅಂಗಣಕ್ಕೆ ಆಗಮನ, 12 ಕ್ಕೆ ಮಹಾಪೂಜೆ, ಅಯ್ಯಪ್ಪನ್ ಪಾಟ್ಟ್, ಪೊಲಿಪ್ಪಾಟ್, ಪಾಲ್ ಕಿಂಡಿ ಸೇವೆ, ಅಗ್ನಿಸೇವೆ, ತಿರಿ ಉಯಿಚ್ಚಿಲ್, ಅಯ್ಯಪ್ಪ ವಾವರ ಯುದ್ಧ, ಶರಣಂ ವಿಳಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.