ಕಾಸರಗೋಡು: ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯ ಪಳ್ಳಿಕೆರೆ ಸನಿಹದ ಪೂಚಕ್ಕಾಡ್ ನಿವಾಸಿ ಎಂ.ಸಿ ಅಬ್ದುಲ್ ಗಫೂರ್ ಹಾಜಿ (55)ಅವರನ್ನು ಕೊಲೆಗೈದು ಎಗರಿಸಲಾದ ಚಿನ್ನದಲ್ಲಿ ಮತ್ತೆ 26ಪವನು ಚಿನ್ನ ತನಿಖಾ ತಮಡ ವಶಪಡಿಸಿಕೊಂಡಿದೆ. ಈ ಹಿಂದೆ 29ಪವನು ಚಿನ್ನವನ್ನು ಕಾಸರಗೋಡು ಹೊಸಬಸ್‍ನಿಲ್ದಾಣ ವಠಾರದ ಚಿನ್ನಾಭರಣ ಅಂಗಡಿಯೊಂದರಿಂದ ವಶಪಡಿಸಿಕೊಂಡಿದ್ದರು. ಒಟ್ಟು 596ಪವನು(4.76ಕಿ.ಗ್ರಾಂ) ಚಿನ್ನ ದೋಚಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಕುಳಿಕುನ್ನುವಿನ ಮಹಿಳಾ ಮಂತ್ರವಾದಿ ಶಮೀಮಾ ಯಾನೆ ಜಿನ್ನುಮ್ಮ (38), ಪತಿ ಉಬೈದ್ (40), ಪೂಚಕ್ಕಾಡ್ ನಿವಾಸಿ ಅನ್ಸಿಫಾ (34) ಮತ್ತು ಮಧೂರಿನ ಆಯಿಷಾ (40) ಎಂಬವರನ್ನು ಬಂಧಿಸಲಾಗಿದೆ.
ಈ ಮಧ್ಯೆ ಮಂಗಳವಾರ ಆರೋಪಿಗಳನ್ನು ಚಂದ್ರಗಿರಿ ರಸ್ತೆಯ ಚಿನ್ನಾಭರಣ ಅಂಗಡಿಗೆ ತಲುಪಿಸಿ ಮಾಹಿತಿ ಸಂಗ್ರಹಿಸಲಾಯಿತು.