ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) 26ನೇ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.
ಇಲ್ಲಿರುವ ಆರ್‌ಬಿಐನ ಪ್ರಧಾನ ಕಚೇರಿಗೆ ಬೆಳಿಗ್ಗೆ ಆಗಮಿಸಿದ ಅವರನ್ನು ಹಿರಿಯ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ಅವರು ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸುವ ಚಿತ್ರಗಳನ್ನು ಆರ್‌ಬಿಐನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಇತ್ತೀಚಿನವರೆಗೂ ಕಂದಾಯ ಕಾರ್ಯದರ್ಶಿಯಾಗಿದ್ದ ಮಲ್ಹೋತ್ರಾ ಅವರು, ಇಂದು ದಾಖಲೆಗಳಿಗೆ ಸಹಿ ಹಾಕುವ ಮೂಲಕ ಆರ್‌ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕಾರ ಮಾಡಿದರು.
ಆರ್‌ಬಿಐನ ಡೆಪ್ಯೂಟಿ ಗವರ್ನರ್‌ಗಳಾದ ಸ್ವಾಮಿನಾಥನ್ ಜೆ., ಎಂ. ರಾಮೇಶ್ವರ ರಾವ್ ಹಾಗೂ ಟಿ. ರಬಿ ಶಂಕರ್ ಅವರು ಈ ವೇಳೆ ಹಾಜರಿದ್ದರು.