ತಿರುಪತಿ: ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ವ್ಯಾಪ್ತಿಯಲ್ಲಿರುವ ತಾರಿಗೊಂಡದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ಭಾನುವಾರ ಚಿನ್ನದ ಕಿರೀಟವನ್ನು ದೇಣಿಗೆಯಾಗಿ ನೀಡಲಾಗಿದೆ.
ಈ ದೇವಾಲಯವು ತಿರುಪತಿಯಿಂದ 110 ಕಿ.ಮೀ ದೂರದಲ್ಲಿದೆ. ಚೆನ್ನೈ ಮೂಲದ ಭಕ್ತರಾದ ವಸಂತ ಲಕ್ಷ್ಮಿ, ಮಾಧವಿ ಮತ್ತು ಮನೋಹರ್ ಅವರು ಸುಮಾರು ₹ 27 ಲಕ್ಷ ಮೌಲ್ಯದ 340.930 ಗ್ರಾಂ ತೂಕದ ಚಿನ್ನದ ಕಿರೀಟವನ್ನು ದೇಣಿಗೆಯಾಗಿ ನೀಡಿದ್ದಾರೆ ಎಂದು ಎಂದು ಟಿಟಿಡಿ ಪ್ರಕಟಣೆ ತಿಳಿಸಿದೆ.