ನವದೆಹಲಿ: ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಧೀನದಲ್ಲಿರುವ ಹಣಕಾಸು ಗುಪ್ತಚರ ಘಟಕ (ಎಫ್‍ಐಯು) 2024ರಲ್ಲಿ 2,763.30 ಕೋಟಿ ರೂ.ಗಳ ಕ್ರಿಮಿನಲ್ ಆದಾಯವನ್ನು ಪತ್ತೆ ಮಾಡಿದೆ.
10,998 ಕೋಟಿ ಅಘೋಷಿತ ಆದಾಯವೂ ಪತ್ತೆಯಾಗಿದೆ. 983.40 ಕೋಟಿ ಮೌಲ್ಯದ ಆಸ್ತಿಯೂ ಪತ್ತೆಯಾಗಿದೆ. 461 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. 184 ಜನರನ್ನು ಅಕ್ರಮ ಹಣ ವರ್ಗಾವಣೆ ಮತ್ತು ಭಯೋತ್ಪಾದಕ ಹಣಕಾಸು ಸಂಬಂಧಿತ ಅಪರಾಧಗಳಿಗಾಗಿ ಬಂಧಿಸಲಾಗಿದೆ. ಇದು ಕಂದಾಯ ಇಲಾಖೆಯ ವಾರ್ಷಿಕ ಪರಿಶೀಲನೆಯ ಅಂಕಿ ಅಂಶ.
ಎಫ್.ಐ.ಯು ಕೇಂದ್ರೀಯ ನೋಡಲ್ ಏಜೆನ್ಸಿಯಾಗಿದ್ದು ಅದು ಹಣಕಾಸು ವಲಯ ಮತ್ತು ಕಾನೂನು ಜಾರಿ ಏಜೆನ್ಸಿಗಳ ನಡುವೆ ಜಂಟಿಯಾಗಿ ಕಾರ್ಯನಿರ್ವಹಿಸುತ್ತದೆ. ಎಫ್‍ಐಯು ಮನಿ ಲಾಂಡರಿಂಗ್, ಭಯೋತ್ಪಾದನೆ ಮತ್ತು ಇತರ ಮನಿ ಲಾಂಡರಿಂಗ್‍ಗೆ ಸಂಬಂಧಿಸಿದ ಅನುಮಾನಾಸ್ಪದ ಹಣಕಾಸು ವಹಿವಾಟುಗಳ ಕುರಿತು ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ, ವಿಶ್ಲೇಷಿಸುತ್ತದೆ ಮತ್ತು ರವಾನಿಸುತ್ತದೆ. ಹಂಚಿದ ಗೌಪ್ಯ ಮಾಹಿತಿಯನ್ನಾಧರಿಸಿದ ಕ್ರಮಗಳು ಕೋಟಿಗಟ್ಟಲೆ ಪತ್ತೆಗೆ ಕಾರಣವಾಯಿತು.
ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಪೋರ್ಸ್ (ಎಫ್‍ಎಟಿಎಫ್), ಜಾಗತಿಕ ಹಣ ವರ್ಗಾವಣೆ ಮತ್ತು ಭಯೋತ್ಪಾದಕರಿಗೆ ಹಣಕಾಸು ಒದಗಿಸುವುದನ್ನು ಮೇಲ್ವಿಚಾರಣೆ ಮಾಡುವ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಭಾರತವನ್ನು 'ನಿಯಮಿತ ಅನುಸರಣೆ'ಯ ಅತ್ಯುನ್ನತ ವರ್ಗಕ್ಕೆ ಸೇರಿಸಿದೆ. ಶಿಫಾರಸು ಭಾರತವು ತಾಂತ್ರಿಕ ಉತ್ಕøಷ್ಟತೆಯೊಂದಿಗೆ ಉನ್ನತ ಗುಣಮಟ್ಟವನ್ನು ಅಳವಡಿಸುತ್ತದೆ.