ಕಾಸರಗೋಡು : ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಕನ್ನಡ ಭವನ ಪ್ರಕಾಶನ ಕಾಸರಗೋಡು ಹಾಗೂ ಬಿ. ಶಿವಕುಮಾರ್ ಕೋಲಾರ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ (ರಿ.) ರೋಟರಿ ಕ್ಲಬ್ ಕೋಲಾರ ಸಂಯುಕ್ತ ಆಶ್ರಯದಲ್ಲಿ"ಕಾಸರಗೋಡು -ಕೋಲಾರ ಕನ್ನಡ ಉತ್ಸವ 2024" ವಿಶೇಷ ಕನ್ನಡ ಕಾರ್ಯಕ್ರಮ ಡಿ. 28ರಂದು ಮಧ್ಯಾಹ್ನ 2.30 ಕ್ಕೆ ಕೋಲಾರ ಅಮೃತಗಂಗೆ ಮುಖ್ಯ ರಸ್ತೆಯ ಪತ್ರಕರ್ತರ ಭವನದಲ್ಲಿ ಜರುಗಲಿದೆ.
ರಾಷ್ಟ್ರಕವಿ ಕುವೆಂಪು ಅವರ ಜನ್ಮ ದಿನದ "ವಿಶ್ವ ಮಾನವ ಕುವೆಂಪು ದಿನಾಚರಣೆ"ಪ್ರಯುಕ್ತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಕುವೆಂಪು ವಿಶೇಷ ಉಪನ್ಯಾಸ, ಪುಸ್ತಕ ಲೋಕಾರ್ಪಣೆ, ಗೀತಾ ಗಾಯನ ಸಾಂಸ್ಕøತಿಕ ಸಂಭ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯುವುದು. ಈ ಸಂದರ್ಭ ಕನ್ನಡ ಭವನದ ಅಂತಾರಾಜ್ಯ "ಕನ್ನಡ ಪಯಸ್ವಿನಿ-2024' ಪ್ರಶಸ್ತಿ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ನೀಡುವ "ಕುವೆಂಪು ವಿಶ್ವ ಮಾನವ ಕನ್ನಡ ರತ್ನ'ಪ್ರಶಸ್ತಿಯನ್ನು ತಲಾ 10ಮಂದಿಗೆ ನೀಡಲಾಗುವುದು. ಹಿರಿಯ ಕನ್ನಡ ಚೇತನಗಳಿಗೆ ಕುವೆಂಪು ನೆನಪಿನ ಸನ್ಮಾನ, ಗೌರವಾರ್ಪಣೆ ನಡೆಯುವುದು. ಸಮಾರಂಭದಲ್ಲಿ ಕಾಸರಗೋಡು, ದಕ್ಷಿಣ ಕನ್ನಡ ಜಿಲ್ಲೆಯ ಸಾಹಿತ್ಯ, ಸಾಂಸ್ಕೃತಿಕ ಪ್ರಮುಖರು ಪಾಲುಗೊಳ್ಳಲಿರುವರು ಎಂದು ಕಾಸರಗೋಡಿನ ಸೀತಮ್ಮ ಪುರುಷನಾಯಕ ಸ್ಮಾರಕ, ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ ಸ್ಥಾಪಕಾಧ್ಯಕ್ಷ ವಾಮನ್ ರಾವ್ ಬೇಕಲ್ ಹಾಗೂ ಸ್ವರ್ಣಭೂಮಿ ಫೌಂಡೇಶನ್ ಕೋಲಾರದ ಅಧ್ಯಕ್ಷರಾದ ಬಿ. ಶಿವಕುಮಾರ್ ಕೋಲಾರ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.