ಕಾಸರಗೋಡು: ಸಾರ್ವಜನಿಕರ ದೂರುಗಳನ್ನು ನಿವಾರಿಸಲು ಸಚಿವರ ನೇತೃತ್ವದಲ್ಲಿ ತಾಲೂಕು ಮಟ್ಟದಲ್ಲಿ ಆಯೋಜಿಸಿರುವ ದೂರು ಪರಿಹಾರ ಅದಾಲತ್‍ಗೆ ದೂರುಗಳನ್ನು ಸ್ವೀಕರಿಸಲು ಆರಂಭಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 28 ರಿಂದ ಜನವರಿ 6 ರವರೆಗೆ ದೂರು ಪರಿಹಾರ ಅದಾಲತ್ ನಡೆಯಲಿದೆ. ರಾಜ್ಯ ನೋಂದವಣಾ ಖಾತೆ ಸಚಿವ ರಾಮಚಂದ್ರನ್ ಕಡನ್ನಪಳ್ಳಿ ಹಾಗೂ ಕ್ರೀಡಾ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ವಿ.ಅಬ್ದುಲ್ ರೆಹಮಾನ್ ನೇತೃತ್ವ ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಡಿಸೆಂಬರ್ 23ರವರೆಗೆ ಅದಾಲತ್‍ಗೆ ದೂರು ಸಲ್ಲಿಸಬಹುದು.
ಡಿಸೆಂಬರ್ 28ರಂದು ಕಾಸರಗೋಡು ತಾಲೂಕು ಅದಾಲತ್ ನಡೆಯಲಿದೆ. ಜನವರಿ 3ರಂದು ಹೊಸದುರ್ಗ ತಾಲೂಕು, 4 ರಂದು ಮಂಜೇಶ್ವರ ತಾಲೂಕು ಮತ್ತು6 ರಂದು ವೆಳ್ಳರಿಕುಂಡು ತಾಲೂಕಿನಲ್ಲಿ ಅದಾಲತ್ ನಡೆಯಲಿದೆ. ಅದಾಲತ್ ನಲ್ಲಿ ಪರಿಗಣಿಸುವ ದೂರುಗಳನ್ನು ಕಛೇರಿಗಳಲ್ಲಿ ಮತ್ತು ಅಕ್ಷಯ ಕೇಂದ್ರಗಳಲ್ಲಿ ರಿಸರ್ವ್ ಪೆÇೀರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ದೂರಿನಲ್ಲಿ ದೂರುದಾರರ ಹೆಸರು, ವಿಳಾಸ, ಇಮೇಲ್, ದೂರವಾಣಿ ಸಂಖ್ಯೆ, ವಾಟ್ಸಪ್ ಸಂಖ್ಯೆ, ಜಿಲ್ಲೆ, ತಾಲೂಕು, ದೂರಿನ ತನಿಖೆ ನಡೆದಿರುವ ಕಚೇರಿ ಮತ್ತು ಕಡತ ಸಂಖ್ಯೆಯನ್ನು ಒಳಗೊಂಡಿರಬೇಕು. ಅದಾಲತ್‍ನಲ್ಲಿ ಪರಿಗಣನೆಗೆ ನಿಗದಿಪಡಿಸಿದ ವಿಷಯಗಳ ಮೇಲೆ ಮಾತ್ರ ದೂರುಗಳನ್ನು ಸಲ್ಲಿಸಬೇಕು.
ಅದಾಲತ್ ಪರಿಗಣಿಸಲಾದ ವಿಷಯ:
ಭೂಮಿಗೆ ಸಂಬಂಧಿಸಿದ ವಿಷಯಗಳು (ಅನಧಿಕೃತ ಪ್ರವೇಶ, ಗಡಿ ಗುರುತಿಸುವಿಕೆ, ಅಕ್ರಮ ನಿರ್ಮಾಣ, ಭೂಮಿ ಅತಿಕ್ರಮಣ, ಗಡಿ ವಿವಾದಗಳು ಮತ್ತು ರಸ್ತೆ ಅಡಚಣೆ) ಪ್ರಮಾಣಪತ್ರಗಳು, ಪರವಾನಗಿಗಳ ಮಂಜೂರಾತಿಯಲ್ಲಿ ವಿಳಂಬ ಯಾ ನಿರಾಕರಣೆ,ಕಟ್ಟಡ ನಿಯಮಗಳಿಗೆ ಸಂಬಂಧಿಸಿದ (ಕಟ್ಟಡ ಸಂಖ್ಯೆ, ತೆರಿಗೆ) ವೃದ್ಧಾಪ್ಯ ಆರೈಕೆ, ಪರಿಶಿಷ್ಟ ಜಾತಿ-ಪರಿಶಿಷ್ಟ ವರ್ಗದವರಿಗೆ ವಿವಿಧ ಪ್ರಯೋಜನಗಳು, ಮೀನುಗಾರಿಕಾ ಕಾರ್ಮಿಕರಿಗೆ ಸಂಬಂಧಿಸಿದವುಗಳು, ದೈಹಿಕ, ಬೌದ್ಧಿಕ ಯಾ ಮಾನಸಿಕವಾಗಿ ವಿಕಲಚೇತನರ ಪುನರ್ವಸತಿ, ಹಣಕಾಸಿನ ನೆರವು, ಪಿಂಚಣಿ ಮತ್ತು ಇತರ ಸಂಬಂಧಿತ ಅಗತ್ಯತೆಗಳು, ಪರಿಸರ ಮಾಲಿನ್ಯ ಅಥವಾ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಜಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಕುಡಿಯುವ ನೀರು, ಪಡಿತರ ಚೀಟಿ (ಎಪಿಎಲ್/ಬಿಪಿಎಲ್) ,ವೈದ್ಯಕೀಯ ಅಗತ್ಯಗಳು , ಕೃಷಿ ಬೆಳೆಗಳ ಸಂಗ್ರಹಣೆ ಮತ್ತು ವಿತರಣೆ ಬೆಳೆ ವಿಮೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಇತರ ವಿಷಯಗಳು, ಸಾಕು ಪ್ರಾಣಿಗಳಿಗೆ ಪರಿಹಾರ, ಸಹಾಯ ಮತ್ತು ವಲಯಕ್ಕೆ ಸಂಬಂಧಿಸಿದ ಇತರ ವಿಷಯಗಳು, ಆಹಾರ ಸುರಕ್ಷತೆ, ಕೈಗಾರಿಕಾ ಉದ್ಯಮಗಳು ಮತ್ತು ಆರೋಗ್ಯ ಕ್ಷೇತ್ರದ ಸಂಸ್ಥೆಗಳ ಪರವಾನಗಿಗೆ ಸಂಬಂಧಿಸಿದ ವಿಷಯಗಳು, ವನ್ಯಜೀವಿ ದಾಳಿಯಿಂದ ರಕ್ಷಣೆ- ಪರಿಹಾರ, ವಿವಿಧ ಸ್ಕಾಲರ್‍ಶಿಪ್‍ಗಳಿಗೆ ಸಂಬಂಧಿಸಿದ ದೂರು ಯಾ ಮನವಿ, ಜೌಗು ಪ್ರದೇಶ ಸಂರಕ್ಷಣೆ, ಅಪಾಯಕಾರಿ ಮರಗಳನ್ನು ಕಡಿಯುವುದು, ಎಂಡೋಸಲ್ಫಾನ್ ಸಂತ್ರಸ್ತರ ಸಮಸ್ಯೆಗಳು ಮತ್ತು ನೈಸರ್ಗಿಕ ವಿಕೋಪಗಳಿಗೆ ಪರಿಹಾರ, ಇತ್ಯಾದಿ ವಿಷಯಗಳನ್ನು ಅದಾಲತ್ ನಲ್ಲಿ ಪರಿಗಣಿಸಲಾಗುವುದು.