ಭೋಪಾಲ್: ಮಧ್ಯಪ್ರದೇಶದಲ್ಲಿ ನಿವೃತ್ತ (ವಿಆರ್‌ಎಸ್) ಕಾನ್‌ಸ್ಟೆಬಲ್ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ₹ 2.87 ಕೋಟಿ ನಗದು, ₹ 7.98 ಕೋಟಿ ಮೌಲ್ಯದ ಆಸ್ತಿ ಹಾಗೂ 234 ಕೆ.ಜಿ. ಬೆಳ್ಳಿ ವಶಪಡಿಸಿಕೊಂಡಿದ್ದಾರೆ.
ಕಾನ್‌ಸ್ಟೆಬಲ್ ಸೌರಭ್ ಶರ್ಮಾ ನಿವಾಸ ಮತ್ತು ಕಚೇರಿಯಲ್ಲಿ ಶೋಧ ನಡೆಸಿದ ಲೋಕಾಯುಕ್ತರು ಸುಮಾರ ₹ 10 ಕೋಟಿ ಮೌಲ್ಯದ ಆಸ್ತಿ, ಬೆಳ್ಳಿ ಹಾಗೂ ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೌರಭ್ ಶರ್ಮಾ ಅವರ ತಂದೆ ಆರ್.ಕೆ ಶರ್ಮಾ ಸರ್ಕಾರಿ ವೈದ್ಯರಾಗಿದ್ದರು. ಅವರು 2015ರಲ್ಲಿ ನಿಧನರಾದರು. ಅದೇ ವರ್ಷ ಸೌರಬ್ ಅನುಕಂಪದ ಕಾಯ್ದೆ ಅಡಿಯಲ್ಲಿ ರಾಜ್ಯ ಸಾರಿಗೆ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಉದ್ಯೋಗಕ್ಕೆ ಸೇರಿದರು. ನಂತರ ಅವರು 2023ರಲ್ಲಿ ಸ್ವಯಂ ನಿವೃತ್ತಿ ಪಡೆದರು ಎಂದು ಲೋಕಾಯುಕ್ತ ಪೊಲೀಸ್ ಮಹಾನಿರ್ದೇಶಕ ಜೈದೀಪ್ ಪ್ರಸಾದ್ ತಿಳಿಸಿದರು.
ಭ್ರಷ್ಟ ಮಾರ್ಗಗಳಿಂದ ಸಂಪಾದಿಸಿದ ಹಣವನ್ನು ಬಳಸಿಕೊಂಡು, ಸೌರಬ್ ತಮ್ಮ ತಾಯಿ, ಪತ್ನಿ, ಅತ್ತೆ ಮತ್ತು ಆಪ್ತರ ಹೆಸರಿನಲ್ಲಿ ಶಾಲೆ ಮತ್ತು ಹೋಟೆಲ್‌ಗಳನ್ನು ಸ್ಥಾಪಿಸಿದ್ದಾರೆ ಎಂದು ಜೈದೀಪ್ ಪ್ರಸಾದ್ ಹೇಳಿದ್ದಾರೆ.