ಕೊಚ್ಚಿ: ದೃಶ್ಯ-ಶ್ರವಣ-ಕಲಾ ಕ್ಷೇತ್ರದಲ್ಲಿ ಹೊಸ ಸಂಸ್ಕøತಿ ಮೂಡಿಸಿದ ಮೃದಂಗ ವಿಷನ್ ನೇತೃತ್ವದಲ್ಲಿ 12000 ನೃತ್ಯಪಟುಗಳ ಭರತನಾಟ್ಯಕ್ಕೆ ಸಿದ್ಧತೆ ಪೂರ್ಣಗೊಂಡಿದೆ ಎಂದು ಸಂಘಟಕರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ್ದಾರೆ.
ಡಿ.29 ರಂದು ಸಂಜೆ 6 ಗಂಟೆಗೆ ಕಾಲೂರಿನ ಜವಾಹರಲಾಲ್ ನೆಹರು ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನರ್ತಕರು ನೃತ್ಯ ಪ್ರದರ್ಶಿಸಲಿದ್ದಾರೆ. ಸಂಜೆ ಕಾರ್ಯಕ್ರಮವನ್ನು ಸಚಿವ ಸಾಜಿ ಚೆರಿಯನ್ ಉದ್ಘಾಟಿಸುವರು.
ಇದಕ್ಕೂ ಮೊದಲು ತಮಿಳುನಾಡಿನಲ್ಲಿ 10,500 ನೃತ್ಯಗಾರರು ಭಾಗವಹಿಸಿದ್ದ ಭರತನಾಟ್ಯ ಗಿನ್ನಿಸ್ ದಾಖಲೆಯಾಗಿತ್ತು. ಇದನ್ನು ಮೀರಿ ದಾಖಲೆ ನಿರ್ಮಿಸಲು ಸಂಘಟಕರು ಪ್ರಯತ್ನಿಸುತ್ತಿದ್ದಾರೆ.
ಪದ್ಮಶ್ರೀ ಕೈದಪ್ರಂ ದಾಮೋದರನ್ ನಂಬೂದಿರಿಯವರ ಸಾಹಿತ್ಯಕ್ಕೆ ಅವರ ಪುತ್ರ ದೀಪಾಂಕುರನ್ ಸಂಗೀತ ಸಂಯೋಜನೆ ಹಾಗೂ ಹಿನ್ನೆಲೆ ಗಾಯಕ ಅನೂಪ್ ಶಂಕರ್ ಅವರು ಹಾಡಿರುವ ಭಾವಗೀತೆಗೆ ಚಿತ್ರನಟಿ ದಿವ್ಯಾ ಉಣ್ಣಿ ನೇತೃತ್ವದ ನೃತ್ಯಗಾರರು ಹೆಜ್ಜೆ ಹಾಕಲಿದ್ದಾರೆ. ಸುಮಾರು ಐವತ್ತು ದೇಶಗಳ ನೃತ್ಯ ಕಲಾವಿದರೂ ಇದರಲ್ಲಿ ಭಾಗವಹಿಸಲಿದ್ದಾರೆ. ಏಳು ವರ್ಷ ಮೇಲ್ಪಟ್ಟ ನೃತ್ಯ ಪ್ರೇಮಿಗಳು ಮೃದಂಗನಾದಂ ಭರತನಾಟ್ಯದಲ್ಲಿ ಸ್ತ್ರೀ-ಪುರುಷ ಭೇದವಿಲ್ಲದೆ ಭಾಗವಹಿಸುವರು.
ಎರ್ನಾಕುಳಂ ಕ್ರೌನ್ ಪ್ಲಾಜಾದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಕೈದಪ್ರಂ ದಾಮೋದರನ್ ನಂಬೂದಿರಿ, ದೀಪಾಂಕುರನ್, ಅನೂಪ್ ಶಂಕರ್ ಮತ್ತು ಸಿಜೋಯ್ ವರ್ಗೀಸ್ ಭಾಗವಹಿಸಿದ್ದರು. ಕಲ್ಯಾಣ್ ಸಿಲ್ಕ್ಸ್ ವ್ಯವಸ್ಥಾಪಕ ನಿರ್ದೇಶಕ ಟಿ.ಎಸ್. ಪಟ್ಟಾಭಿರಾಮನ್ ಅವರು ಚಿತ್ರನಟಿ ಲಕ್ಷ್ಮೀ ಗೋಪಾಲಸ್ವಾಮಿ ಅವರಿಗೆ ನೀಡುವ ಮೂಲಕ ನೃತ್ಯಗಾರರ ಅಡಿಯೊ ಬಿಡುಗಡೆ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಟಿ ಮತ್ತು ನರ್ತಕಿ ದಿವ್ಯಾ ಉಣ್ಣಿ, ಮೃದಂಗವಿಷನ್ ಮುಖ್ಯ ಪೋಷಕ ಸಿಜೋಯ್ ವರ್ಗೀಸ್, ನಿಘೋಷ್ ಕುಮಾರ್ ಮತ್ತು ಶಮೀರ್ ಉಪಸ್ಥಿತರಿದ್ದರು. ಜವಾಹರಲಾಲ್ ನೆಹರೂ ಸ್ಟೇಡಿಯಂನಲ್ಲಿರುವ ಸ್ಥಳಕ್ಕೆ ಮಧ್ಯಾಹ್ನ 3 ಗಂಟೆಯಿಂದ ಪ್ರವೇಶವನ್ನು ಅನುಮತಿಸಲಾಗಿದೆ. ಬುಕ್ ಮೈ ಶೋನಲ್ಲಿ 149 ರೂ ಬೆಲೆಯ ಟಿಕೆಟ್‍ಗಳು ಲಭ್ಯವಿದೆ.