ಪೆರ್ಲ: ಸಾಹಿತಿ, ಸಂಶೋಧಕ, ಶಿಕ್ಷಕ ಸುಭಾಷ ಪಟ್ಟಾಜೆ ಅವರು ಬರೆದಿರುವ ಸುನಂದಾ ಬೆಳಗಾಂವಕರ ಅವರ ಬಗೆಗಿನ ವ್ಯಕ್ತಿತ್ವ-ಸಾಹಿತ್ಯ ಸಾದನೆಗಳ ಕೃತಿಯ ಬಿಡುಗಡೆ ಸಮಾರಂಭ ಡಿ.29 ರಂದು ಭಾನುವಾರ ಸಂಜೆ 5ಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾ ಭವನದಲ್ಲಿ ನಡೆಯಲಿದೆ.
ಸಾಹಿತಿ ರಾಘವೇಂದ್ರ ಪಾಟೀಲ ಅವರು ಕೃತಿ ಲೋಕಾರ್ಪಣೆಗೊಳಿಸುವರು. ಯುವ ಸಾಹಿತಿ ವಿಕಾಸ ಹೊಸಮನಿ ಕೃತಿ ಪರಿಚಯನೀಡಿ ಮಾತನಾಡುವರು. ಸಾಹಿತಿ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು.ಕೃತಿಯ ಲೇಖಕ ಸುಭಾಷ ಪಟ್ಟಾಜೆ, ಪ್ರಕಾಶಕ ಡಾ.ವೈಜಯಂತಿ ಸೂರ್ಯನಾರಾಯಣ, ಸೀಮಾ ಕುಲಕರ್ಣಿ ಉಪಸ್ಥಿತರಿರುವರು.