ತಿರುವನಂತಪುರ: ಬಿಹಾರಕ್ಕೆ ನೇಮಕಗೊಂಡ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರಿಗೆ ಇಂದು(ಶನಿವಾರ) ರಾಜಭವನದಲ್ಲಿ ಬೀಳ್ಕೊಡುಗೆ ನೀಡಲಾಗುವುದು. ಸಂಜೆ ನಾಲ್ಕು ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಆದರೆ, ಸರ್ಕಾರ ನೀಡಬೇಕಿರುವ ರಜೆಯ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜನವರಿ 2 ರಂದು ಕೇರಳದ ರಾಜ್ಯಪಾಲರಾಗಿ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಅವರು ಜನವರಿ 1 ರಂದು ರಾಜಧಾನಿ ತಲುಪಲಿದ್ದಾರೆ.
ಜನವರಿ 2 ರಂದು ಬಿಹಾರದ ರಾಜ್ಯಪಾಲರಾಗಿ ಆರಿಫ್ ಮುಹಮ್ಮದ್ ಖಾನ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ಆರೆಸ್ಸೆಸ್ ಹಿನ್ನೆಲೆಯುಳ್ಳ ಗೋವಾ ಮೂಲದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಈ ಹಿಂದೆ ಹಿಮಾಚಲ ಪ್ರದೇಶದ ರಾಜ್ಯಪಾಲರಾಗಿ ಹಾಗೂ ಗೋವಾದಲ್ಲಿ ಸಚಿವರಾಗಿ ಮತ್ತು ಸ್ಪೀಕರ್ ಆಗಿ ಕೆಲಸ ಮಾಡಿದ್ದಾರೆ.