ನವದೆಹಲಿ: 'ಪೂರ್ವದತ್ತ ಚಿತ್ತ' (ಆ‍್ಯಕ್ಟ್ ಈಸ್ಟ್), 'ನೆರೆಹೊರೆಯವರೇ ಮೊದಲು' (ನೈಬರ್‌ಹೂಡ್ ಫರ್ಸ್ಟ್) ನೀತಿಯಡಿ ಮಾನವೀಯ ನೆರವಿನ ಭಾಗವಾಗಿ ಭಾರತವು ಮ್ಯಾನ್ಮಾರ್‌ಗೆ 2,200 ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ರವಾನಿಸಿದೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, 'ಮ್ಯಾನ್ಮಾರ್ ಜನರಿಗೆ ಮಾನವೀಯ ನೆರವು ನೀಡುವ ತನ್ನ ಬದ್ಧತೆಯನ್ನು ಭಾರತವು ಪುನರುಚ್ಚರಿಸುತ್ತದೆ.
ಕಳೆದ ವಾರ ವಿಶ್ವಸಂಸ್ಥೆಯ ಸುದ್ದಿ ಸಂಸ್ಥೆ, ಮ್ಯಾನ್ಮಾರ್ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 'ಮ್ಯಾನ್ಮಾರ್ನಲ್ಲಿ ನೆಲಬಾಂಬ್ ಸ್ಫೋಟದಿಂದ ಪ್ರತಿವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 2023ರಲ್ಲಿ ಸಾವಿರಕ್ಕೂ ಹೆಚ್ಚು ಜನ ಬಲಿಪಶುಗಳಾಗಿದ್ದಾರೆ. ಇದರ ಪರಿಣಾಮ ನಾಗರಿಕರು ಬಿಕ್ಕಟ್ಟಿಗೆ ಸಿಲುಕಿದ್ದಾರೆ' ಎಂದು ಹೇಳಿದೆ.