HEALTH TIPS

ದಂಪತಿಗೆ ಕನಿಷ್ಠ 3 ಮಕ್ಕಳು ಇರಬೇಕು: RSS ಮುಖ್ಯಸ್ಥ ಮೋಹನ್ ಭಾಗವತ್

ನಾಗ್ಪುರ: 'ಭಾರತೀಯ ಸಮಾಜ ಉಳಿಯಬೇಕಾದರೆ ಪ್ರತಿ ದಂಪತಿ ಕನಿಷ್ಠ ಮೂವರು ಮಕ್ಕಳನ್ನು ಹೊಂದಬೇಕು' ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆ ನೀಡಿದ್ದಾರೆ.

ನಾಗ್ಪುರದಲ್ಲಿ ನಡೆದ 'ಕಥಲೆ ಕುಲ್ (ಕುಲ) ಸಮ್ಮೇಳನ'ದಲ್ಲಿ ಭಾನುವಾರ ಮಾತನಾಡಿದ ಅವರು ಜನಸಂಖ್ಯಾ ಬೆಳವಣಿಗೆ ದರ ಕುಸಿಯುತ್ತಿರುವುದಕ್ಕೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ತಮ್ಮ ಹೇಳಿಕೆಗೆ ಪೂರಕವಾಗಿ ಭಾಗವತ್‌ ಅವರು ಜನಸಂಖ್ಯಾಶಾಸ್ತ್ರೀಯ ಅಧ್ಯಯನವನ್ನು ಉಲ್ಲೇಖಿಸಿದ್ದಾರೆ.

'ಭಾರತದ ಒಟ್ಟು ಫಲವತ್ತತೆ ದರ (ಟಿಎಫ್‌ಆರ್) ಅಂದರೆ, ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ ಕನಿಷ್ಠ 3 ಆಗಿರಬೇಕು. ಜನಸಂಖ್ಯಾಶಾಸ್ತ್ರವು ಇದನ್ನೇ ಪ್ರತಿಪಾದಿಸುತ್ತದೆ. ಈ ಸಂಖ್ಯೆಯು ಮುಖ್ಯವಾಗಿದೆ. ಏಕೆಂದರೆ ಸಮಾಜ ಉಳಿಯಬೇಕು. ಪ್ರತಿ ಕುಟುಂಬವು ಸಮಾಜದ ಒಂದು ಘಟಕವಾಗಿದೆ' ಎಂದು ಅವರು ಕುಟುಂಬದ ಮಹತ್ವವನ್ನು ಹೇಳಿದರು.

'ಜನಸಂಖ್ಯಾಶಾಸ್ತ್ರೀಯ ಅಧ್ಯಯನಗಳ ಪ್ರಕಾರ, ಒಂದು ಸಮುದಾಯದ ಜನಸಂಖ್ಯೆಯು 2.1ರ ಫಲವತ್ತತೆ ದರಕ್ಕಿಂತ ಕಡಿಮೆಯಾದಾಗ, ಆ ಸಮಾಜವು ಅಳಿವಿನಂಚಿನಲ್ಲಿದೆ ಎಂದರ್ಥ. ಅಂತಹ ಸಮಾಜ ಕಣ್ಮರೆಯಾಗಲು ಬಾಹ್ಯ ಬೆದರಿಕೆಗಳ ಅಗತ್ಯವಿಲ್ಲ; ಅದು ತಾನಾಗೆ ನಶಿಸಿಹೋಗುತ್ತದೆ. ಇದರಿಂದಾಗಿ, ಅನೇಕ ಭಾಷೆಗಳು ಮತ್ತು ಸಮಾಜಗಳು ಅಸ್ತಿತ್ವ ಕಳೆದುಕೊಳ್ಳುತ್ತವೆ. ಆದ್ದರಿಂದ, ನಮ್ಮ ಜನಸಂಖ್ಯೆಯ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆಯಾಗಬಾರದು' ಎಂದು ಅವರು ಎಚ್ಚರಿಸಿದರು.

'ನಮ್ಮ ದೇಶದ ಜನಸಂಖ್ಯಾ ನೀತಿ ನಿರ್ಧಾರವಾಗಿದ್ದು 1998 ಅಥವಾ 2002ರಲ್ಲಿ. ಈ ನೀತಿಯಲ್ಲಿ ಸಮಾಜದ ಜನಸಂಖ್ಯೆಯ ಬೆಳವಣಿಗೆ ದರವು 2.1ಕ್ಕಿಂತ ಕಡಿಮೆ ಇರಬಾರದೆಂದು ಹೇಳಲಾಗಿದೆ. ಸಮಾಜ ಉಳಿಯಬೇಕೆಂದರೆ ಜನಸಂಖ್ಯೆ ಬಹಳ ಮುಖ್ಯವಾಗಿದೆ. ಹಾಗಾಗಿ, ಪ್ರತಿ ದಂಪತಿ ಮೂವರು ಮಕ್ಕಳನ್ನು ಹೊಂದಲೇಬೇಕು' ಎಂದು ಅವರು ಹೇಳಿದರು.

ಭಾಗವತ್ ಅವರ ಈ ಹೇಳಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಇದಕ್ಕೆ ಸಕಾರಾತ್ಮಕ ಮತ್ತು ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಟಿಎಫ್‌ಆರ್‌ 2ಕ್ಕೆ ಕುಸಿದಿದೆ:

2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಭಾರತದ ಟಿಎಫ್‌ಆರ್‌ 2.2ರಿಂದ 2ಕ್ಕೆ ಕುಸಿದಿದ್ದರೆ, ಗರ್ಭನಿರೋಧಕಗಳ ಬಳಕೆ ಪ್ರಮಾಣವು ಶೇ 54ರಿಂದ ಶೇ 67ಕ್ಕೆ ಏರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries