ತ್ರಿಶೂರ್: ಕೇರಳದಲ್ಲಿ ಬಿಜೆಪಿ 30 ಹೊಸ ಜಿಲ್ಲಾ ಸಮಿತಿಗಳನ್ನು ರಚಿಒಸಿದೆ. 14 ಕಂದಾಯ ಜಿಲ್ಲಾ ಸಮಿತಿಗಳನ್ನು ವಿಭಜಿಸಿ ಬಿಜೆಪಿ 30 ಸಂಘಟನೆ ಜಿಲ್ಲಾ ಸಮಿತಿಗಳನ್ನು ರಚಿಸಿದೆ.
ತಿರುವನಂತಪುರಂ, ಎರ್ನಾಕುಳಂ, ತ್ರಿಶೂರ್, ಮಲಪ್ಪುರಂ ಮತ್ತು ಕೋಝಿಕ್ಕೋಡ್‍ನಲ್ಲಿ ಮೂರು ಜಿಲ್ಲಾ ಸಮಿತಿಗಳು ಇರುತ್ತವೆ ಎಂದು ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ತಿಳಿಸಿದ್ದಾರೆ.
ಪತ್ತನಂತಿಟ್ಟ, ವಯನಾಡು, ಕಾಸರಗೋಡು ಜಿಲ್ಲಾ ಸಮಿತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳನ್ನು ಎರಡಾಗಿ ವಿಂಗಡಿಸಿ ಸಂಘಟನೆಯ ಕಾರ್ಯಕ್ಕೆ ಅನುಕೂಲ ಮಾಡಿಕೊಡುವುದಾಗಿ ಕೆ.ಸುರೇಂದ್ರನ್ ತಿಳಿಸಿದರು.