HEALTH TIPS

ರಾಜ್ಯ ಸರ್ಕಾರ ಡಿಸೆಂಬರ್ 30ರೊಳಗೆ ಚುರಲ್ಮಲಾ-ಮುಂಡಕೈ ಪುನರ್ವಸತಿ ಖಚಿತಪಡಿಸಿಕೊಳ್ಳಬೇಕು: ಪಿ.ಕೆ.ಕೃಷ್ಣದಾಸ್

ತಿರುವನಂತಪುರ: ಚುರಲ್‍ಮಲಾ-ಮುಂಡಕೈ ಪುನರ್ವಸತಿ ಯೋಜನೆಯನ್ನು ರಾಜ್ಯ ಸರ್ಕಾರ ಡಿಸೆಂಬರ್ 30ರೊಳಗೆ ಅಂತಿಮಗೊಳಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯ ಪಿ.ಕೆ.ಕೃಷ್ಣದಾಸ್ ಎಚ್ಚರಿಸಿದ್ದಾರೆ. 

ದುರಂತ ಸಂಭವಿಸಿ ನಾಲ್ಕು ತಿಂಗಳು ಕಳೆದರೂ ರಾಜ್ಯ ಒಂದು ಇಂಚು ಕೂಡ ಮುಂದಕ್ಕೆ ಹೋಗಿಲ್ಲ. ರಾಜ್ಯ ಸರ್ಕಾರದ ದುರಾಡಳಿತ ಹಾಗೂ ನಿರಾಸಕ್ತಿಯೇ ಪುನರ್ವಸತಿ ಕುಂಠಿತವಾಗಲು ಕಾರಣ ಎಂದು ಇಂದು ತಿರುವನಂತಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೃಷ್ಣದಾಸ್ ಹೇಳಿದರು. ದುರಂತದ ನೆಪದಲ್ಲಿ ಮುಖ್ಯಮಂತ್ರಿ ಹಾಗೂ ಸರ್ಕಾರ ಸಾಲ ಮನ್ನಾ ಯೋಜನೆ ರೂಪಿಸಿದೆ.

ರಾಜ್ಯವು ತನ್ನ ವೈಫಲ್ಯವನ್ನು ಮರೆಮಾಚಲು ಮತ್ತು ಎಲ್ಲವನ್ನೂ ಕೇಂದ್ರದ ಮೇಲೆ ಹೊರಿಸಲು ಪ್ರಯತ್ನಿಸುತ್ತಿದೆ. ಕೇರಳದಲ್ಲಿ ರಾಜ್ಯ ಮತ್ತ ಹಂಚಿಕೆಯಾಗದ ಕಾರಣ ನಗರಸಭೆ ನೌಕರರು ತಮ್ಮ ವೇತನ ಮತ್ತು ಪಿಂಚಣಿಯನ್ನೂ ನೀಡಲು ಸಾಧ್ಯವಾಗುತ್ತಿಲ್ಲ. ಆಯುಷ್ಮಾನ್ ಭಾರತ್ ಯೋಜನೆಯು ಕೇರಳದಲ್ಲಿ ರಾಜ್ಯದ ಹಂಚಿಕೆ ಲಭ್ಯವಿಲ್ಲದ ಕಾರಣ ಲಭಿಸುತ್ತಿಲ್ಲ. 70 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೇರೆ ರಾಜ್ಯಗಳಲ್ಲಿ ಉಚಿತ ಚಿಕಿತ್ಸೆ ಸಿಗುತ್ತದೆ ಆದರೆ ಕೇರಳದಲ್ಲಿ ಅದನ್ನು ನಿರಾಕರಿಸಲಾಗಿದೆ.

ವಯನಾಡ್ ವಿಷಯದಲ್ಲಿ ಬಿಜೆಪಿ ರಾಜ್ಯ ಸರ್ಕಾರಕ್ಕೆ ಐದು ಬೇಡಿಕೆಗಳನ್ನು ಇಡುತ್ತಿದೆ ಎಂದು ಪಿಕೆ ಕೃಷ್ಣದಾಸ್ ಹೇಳಿದ್ದಾರೆ.

1. ಚುರಲ್ಮಲಾ - ಮುಂಡಕೈ ಪುನರ್ವಸತಿ ಡಿಸೆಂಬರ್ 30 ರ ಮೊದಲು ಖಾತ್ರಿಪಡಿಸಿಕೊಳ್ಳಬೇಕು.

2. ಒಡೆದು ಹೋಗಿರುವ ಮನೆಗಳನ್ನು ಪುನರ್ ನಿರ್ಮಿಸಲು ಇಚ್ಛಿಸುವವರ ಸಭೆಯನ್ನು ಕೂಡಲೇ ಕರೆಯಬೇಕು. ಅಂಥವರ ಪಟ್ಟಿಯನ್ನು ಸರ್ಕಾರ ಪ್ರಕಟಿಸಬೇಕು.

3. ವಯನಾಡಿಗಾಗಿ ಸಂಗ್ರಹಿಸಲಾದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ದುರಂತ ಸಂತ್ರಸ್ತರಿಗೆ ಎಷ್ಟು ಮೊತ್ತವನ್ನು ಖರ್ಚು ಮಾಡಲಾಗಿದೆ ಎಮದು ಬಹಿರಂಗಪಡಿಸಬೇಕು.

4. ಎಸ್.ಡಿ.ಆರ್.ಎಫ್. ನಿಧಿಯಲ್ಲಿ ಪ್ರಸ್ತುತ ಎಷ್ಟು ಕೋಟಿಗಳಿವೆ? ವಯನಾಡಿಗೆ ಎಷ್ಟು ಕೋಟಿ ಖರ್ಚು ಮಾಡಬಹುದು?

5. ದುರಂತವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳುವುದನ್ನು ರಾಜ್ಯ ತಡೆಯಬೇಕು.


ಪುನರ್ವಸತಿ ಯೋಜನೆಯಲ್ಲಿ ಎಷ್ಟು ಕುಟುಂಬಗಳು, ಅವರಿಗೆ ಎಷ್ಟುಮಂದಿಗೆ ಭೂಮಿ ಬೇಕು ಮತ್ತು ಎಷ್ಟು ಮನೆಗಳು ಬೇಕು ಎಂಬ ಯಾವುದೇ ಅಂಕಿಅಂಶಗಳು ರಾಜ್ಯದ ಬಳಿ ಇಲ್ಲ. ಈಗ ವಿವರವಾದ ಯೋಜನೆ ಸಿದ್ಧಪಡಿಸಲು ಕೇಂದ್ರ ಸರ್ಕಾರದಿಂದ ಹಣದ ಅಗತ್ಯವಿದೆ. ರಾಜ್ಯವು ಮಾಡಬೇಕಾದ ಮೊದಲನೆಯದು ನಿಖರವಾದ ರೂಪುರೇಷೆ ಸಿದ್ಧಪಡಿಸುವುದು. ಆದರೆ ಅದನ್ನು ಮಾಡದೆ ಸಿಪಿಎಂ ದುರಂತವನ್ನು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಪಿಣರಾಯಿ ಸರ್ಕಾರ ನಿಜಕ್ಕೂ ಅತಿದೊಡ್ಡ ರಾಷ್ಟ್ರೀಯ ವಿಪತ್ತು ಎಂದರು.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬಂದಿರುವ ಹಣ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರ ವಯನಾಡಿಗೆ ಎಷ್ಟು ರೂಪಾಯಿ ಖರ್ಚು ಮಾಡಿದೆ ಎಂದು ತಿಳಿಯಬೇಕಿದೆ. ಕೇಂದ್ರ ಸರ್ಕಾರ ತುರ್ತು ನೆರವಾಗಿ ಎಷ್ಟು ರೂಪಾಯಿ ನೀಡಿದೆ ಎಂಬುದನ್ನೂ ರಾಜ್ಯ ಸ್ಪಷ್ಟಪಡಿಸಬೇಕು. ಕೇಂದ್ರ ಸರ್ಕಾರ ಮೊದಲ ಹಂತದಲ್ಲಿ 145.90 ಕೋಟಿ ರೂ., ನಂತರ ಮತ್ತೆ 145.90 ಕೋಟಿ ರೂ., ಅಂತಿಮವಾಗಿ ವಯನಾಡಿಗೆ 153 ಕೋಟಿ ರೂ.ನೀಡಿದೆ. ಇದಕ್ಕೆ ಎಷ್ಟು ರೂಪಾಯಿ ಖರ್ಚು ಮಾಡಲಾಗಿದೆ ಎಂದೂ ರಾಜ್ಯ ಸರ್ಕಾರ ಹೇಳಲಿ ಎಂದು ಕೃಷ್ಣದಾಸ್ ಹೇಳಿದರು.

ಸೇನೆಯ ಸೇವೆಗೆ ಹಣದ ವಿಚಾರದಲ್ಲಿ ಮುಖ್ಯಮಂತ್ರಿಗಳು ನೀಡಿರುವ ಹೇಳಿಕೆ ಮಾಹಿತಿರಹಿತವಾಗಿದೆ. ಕೇಂದ್ರ ಕಾನೂನು ಭಾರತದ ಎಲ್ಲಾ ರಾಜ್ಯಗಳಿಗೂ ಅನ್ವಯಿಸುತ್ತದೆ. ಯುಪಿಎ ಸರ್ಕಾರದ ಕಾನೂನು ಈಗಲೂ ಜಾರಿಯಲ್ಲಿದೆ. ಕೇರಳದಲ್ಲಿ, ಇತರ ಸರ್ಕಾರಿ ವ್ಯವಸ್ಥೆಗಳಿಗೆ ಕೆಎಸ್‍ಇಬಿ ಪೂರೈಸುವ ವಿದ್ಯುತ್‍ಗೆ ಸರ್ಕಾರವು ಪಾವತಿಸುತ್ತದೆ. ಎಲ್ಲಾ ಸರ್ಕಾರಿ ವ್ಯವಸ್ಥೆಗಳೂ ಹೀಗೆಯೇ ಕೆಲಸ ಮಾಡುತ್ತವೆ. ರಾಜ್ಯದಲ್ಲಿ ಪ್ರತಿಪಕ್ಷಗಳು ತಮ್ಮ ಪಾತ್ರವನ್ನು ಮರೆಯುತ್ತಿವೆ. ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಅವರು ರಾಜೀನಾಮೆ ನೀಡಿ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಬೇಕು. ಅವರೆಲ್ಲ ಇಂಡಿ ಫ್ರಂಟ್‍ನ ಭಾಗವಾಗಿರುವುದರಿಂದ ಮೌನವಾಗಿವೆ ಎಂದು ಪಿಕೆ ಕೃಷ್ಣದಾಸ್ ಹೇಳಿದರು.

ಸಿಪಿಎಂ ಕೋಝಿಕ್ಕೋಡ್ ಜಿಲ್ಲಾ ಕಾರ್ಯದರ್ಶಿ ಮೆಕ್ 7 ನಿಷೇಧಿತ ಸಂಘಟನೆಯ ಸಂಬಂಧದ ಆರೋಪದಿಂದ ಹಿಂದೆ ಸರಿದಿದ್ದು ಏಕೆ? ಸಿಪಿಎಂ ರಾಜ್ಯ ನಾಯಕತ್ವ ಮೌನವಾಗಿರುವುದೇನು? ಸಿಪಿಎಂ ಭಯೋತ್ಪಾದಕರಿಗೆ ಶರಣಾಗಿದೆ ಎಂದು ಪಿ.ಕೆ.ಕೃಷ್ಣದಾಸ್ ಹೇಳಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries