ಕಾಸರಗೋಡು: ಬಿಆರ್‍ಡಿಸಿ ಸಹಯೋಗದಲ್ಲಿ ಬೇಕಲ ಬೀಚ್ ಪಾರ್ಕ್ ಮತ್ತು ರೆಡ್ ಮೂನ್ ಬೀಚ್ ಪಾರ್ಕ್ ನೇತೃತ್ವದಲ್ಲಿ ನಡೆಯಲಿರುವ ಬೇಕಲ ಬೀಚ್ ಕಾರ್ನಿವಲ್‍ಗೆ ಚಾಲನೆ ನೀಡಲಾಯಿತು. 11 ದಿನಗಳ ಕಾಲ ನಡೆಯುವ ಕಾರ್ನಿವಲ್‍ಗೆ ವರ್ಣರಂಜಿತ ಚಾಲನೆ ದೊರೆಯಿತು. ಉದುಮ ಕ್ಷೇತ್ರದ ಶಾಸಕ ಸಿ.ಎಚ್.ಕುಂಜಂಬು ಬೇಕಲ್ ಬೀಚ್ ಕಾರ್ನಿವಲ್ ಉದ್ಘಾಟಿಸಿದರು.ಪಳ್ಳಿಕ್ಕರ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಕತಾರ್ ಹಾಸ್ಪಿಟಾಲಿಟಿ ಗ್ರೂಪ್ ಅಧ್ಯಕ್ಷ ಕೆ.ಕೆ ಅಬ್ದುಲ್ಲಾ ಹಾಜಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಶಾನವಾಸ್ ಪಾದೂರು, ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಣಿಕಂಠನ್, ಹಕೀಂ ಕುನ್ನಿಲ್, ಕೆ.ಇ.ಎ. ಬಕ್ಕರ್, ಎಂ.ಎ.ಲತೀಫ್, ಬೇಕಲ ಬೀಚ್ ಕಾರ್ನಿವಲ್ ಅಧ್ಯಕ್ಷ ಹಾಗೂ ಬೇಕಲ ಬೀಚ್ ಪಾರ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಕೆ.ಅಬ್ದುಲ್ ಲತೀಫ್, ಬೇಕಲ ಬೀಚ್ ಪಾರ್ಕ್ ನಿರ್ದೇಶಕ ಅನಸ್ ಮುಸ್ತಫಾ, ಕ್ವಾಲಿಟಿ ಗ್ರೂಪ್ ಆಫ್ ಹೊಟೇಲ್ ಅಧ್ಯಕ್ಷ ಮುಸ್ತಫಾ, ಬೇಕಲಕಾರ್ನಿವಲ್ ಸಂಚಾಲಕ ಮತ್ತು ರೆಡ್ ಮೂನ್ ಬೀಚ್ ವ್ಯವಸ್ಥಾಪಕ ನಿರ್ದೇಶಕ ಶಿವದಾಸ್ ಕೀನೇರಿ ಉಪಸ್ಥಿತರಿದ್ದರು.
ಕಾರ್ನೀವಲ್ ಅಲಂಕಾರ, ಕಲ್ ಬೀಚ್ ಕಾರ್ನಿವಲ್, ಪ್ರಿದಿನ ಕಲಾವಿದರ ಸಂಗೀತ ಔತಣ, ಬೀದಿ ಪ್ರದರ್ಶನ, ಪೆಟ್ ಶೋ, ಅಮ್ಯೂಸ್‍ಮೆಂಟ್, ಶಾಪಿಂಗ್ ಸ್ಟ್ರೀಟ್ ಮತ್ತು ಫುಡ್ ಸ್ಟ್ರೀಟ್‍ನಂತಹ ಆಕರ್ಷಣೆಗಳೊಂದಿಗೆ ನಡೆಸಲಾಗುತ್ತದೆ. ಡಿ. 31ರ ವರೆಗೆ ಬೇಕಲ ಬೀಚ್ ಕಾರ್ನಿವಲ್ ನಡೆಯಲಿದೆ.