ಬದಿಯಡ್ಕ: ದೇವರನ್ನು ನಂಬಿ ಬದುಕುವುದೇ ಧರ್ಮ. ಆಧುನಿಕ ಯುಗದಲ್ಲಿ ಯುವ ಶಕ್ತಿಗಳು ದೇವಸ್ಥಾನಗಳಲ್ಲಿ ಹಾಗೂ ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ದೇವರ ಜೀರ್ಣೋದ್ಧಾರಕಾರ್ಯಗಳಲ್ಲಿ ಪಾಲ್ಗೊಳ್ಳಬೇಕಾದರೆ ಪೂರ್ವಜನ್ಮದ ಪುಣ್ಯವಿರಬೇಕು. ಅಂತಹ ಪುಣ್ಯಜೀವಗಳಲ್ಲಿ ದೇವರೇ ಅಂಕುರವನ್ನು ಬಿತ್ತಿದ್ದಾರೆ. ದೇವರ ಕೆಲಸವನ್ನು ಮಾಡಿದರೆ ಪುಣ್ಯವನ್ನು ಸಂಪಾದಿಸಿದಂತೆ ಎಂದು ಕೊಡುಗೈ ದಾನಿ, ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಹೇಳಿದರು.
ಭಾನುವಾರ ರಾತ್ರಿ ಪೆರಡಾಲ ಶ್ರೀ ಉದನೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಸುಸಂದರ್ರ್ಭದಲ್ಲಿ ಶ್ರೀ ಶಿವಶಕ್ತಿ ಪೆರಡಾಲ ಇದರ 32ನೇ ವಾರ್ಷಿಕೋತ್ಸವದ ಸಭೆಯ ಅಧ್ಯಕ್ಷತೆ ವಹಿಸಿ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಶಿವಶಕ್ತಿಯ ಮೂಲಕ ಶುಭಲಕ್ಷಣಗಳು ಗೋಚರಿಸುತ್ತಿವೆ. ನಿರಂತರ ದೇವರ ಸ್ಮರಣೆಯಿಂದ ಮೋಕ್ಷ ಲಭಿಸುತ್ತದೆ. ಬಟ್ಟಲು ಕಾಣಿಕೆಯನ್ನು ಹಾಕಿ ಗ್ರಾಮದೇವರನ್ನು ನೆನೆದು ಬದುಕಬೇಕು. ಭೂಮಿಗೆ ಬಿದ್ದ ಜೀವವನ್ನು ಬದುಕಿಸಿಕೊಡುವ ಅಪಾರ ಶಕ್ತಿಯೇ ದೇವರಾಗಿದ್ದಾರೆ ಎಂದರು.
ಶ್ರೀ ಉದನೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ವೆಂಕಟ್ರಮಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿ ಪ್ರಧಾÀÀನ ಕಾರ್ಯದರ್ಶಿ ಜಗನ್ನಾಥ ರೈ, ಸೇವಾಸಮಿತಿ ಪ್ರಧಾನ ಕಾರ್ಯದರ್ಶಿ ನಿರಂಜನ ರೈ ಪೆರಡಾಲ ಶುಭಾಶಂಸನೆಗೈದರು. ಈ ಸಂದರ್ಭದಲ್ಲಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿ, ಬ್ರಹ್ಮಶ್ರೀ ಯೋಗೀಶ್ ಕಡಮಣ್ಣಾಯ ಆರಿಕ್ಕಾಡಿ, ಬ್ರಹ್ಮವಾಹಕ ಗೋಪಾಲಕೃಷ್ಣ ಅಡಿಗ ಕುಂಬಳೆ, ವೇದಮೂರ್ತಿ ಶಿವರಾಮ ಭಟ್ ಶಾಂತಿಪಳ್ಳ, ವಿಷ್ಣು ಭಟ್ ವಿ.ಎಂ.ನಗರ ಬೇಳ, ಗಂಗಾಧರ ಮಾರಾರ್ ನೀಲೇಶ್ವರ, ನರಸಿಂಹ ಪುರುಷ ಬಾಂಜತ್ತಡ್ಕ, ಬಾಬು ಚೇನಕ್ಕೋಡು ಮಧೂರು, ಶ್ರೀಧರ ಚೆಟ್ಟಿಯಾರ್ ಶಾಂತಿಪಳ್ಳ, ರಾಜೇಶ್ವರಿ, ಜಯಂತಿ, ಕಮಲ, ರಮೇಶ್, ಲಕ್ಷ್ಮೀ, ಬಾಬು, ಚಂದ್ರ, ವಿಶ್ವನಾಥ, ಗ್ರಾಮಪಂಚಾಯಿತಿ ವಾರ್ಡು ಸದಸ್ಯ ಶ್ಯಾಮಪ್ರಸಾದ ಮಾನ್ಯ ಇವರಿಗೆ ಗೌರವಾರ್ಪಣೆ ಸನ್ಮಾನ ನಡೆಯಿತು. ಕ್ಲಬ್ ಸದಸ್ಯ ಉದಯಶಂಕರ ಭಟ್ ಪಟ್ಟಾಜೆ ಪ್ರಾರ್ಥನೆ ಹಾಡಿದರು. ಡಾ. ಶ್ರೀಶಕುಮಾರ ಪಂಜಿತ್ತಡ್ಕ ನಿರೂಪಿಸಿದರು. ಕ್ಲಬ್ಬಿನ ಸದಸ್ಯ ಗಣೇಶ್ ಪ್ರಸಾದ ಕಡಪ್ಪು ಸ್ವಾಗತಿಸಿದರು. ಶಿವಶಕ್ತಿಯ ಅಧ್ಯಕ್ಷ ಭಾಸ್ಕರ ಪಂಜಿತ್ತಡ್ಕ, ಕಾರ್ಯದರ್ಶಿ ಪುಟ್ಟನಾಯ್ಕ ಪೆರಡಾಲ, ಕೋಶಾಧಿಕಾರಿ ನವೀನ ಪಟ್ಟಾಜೆ ಹಾಗೂ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಹಾಸ್ಯೋತ್ಸವ, ಹಾಸ್ಯನಟ ಪೊಳ್ಳಾಚಿ ಮುತ್ತು ಸಾದರಪಡಿಸಿದ ಗಾನಮೇಳ ಜರಗಿತು.