HEALTH TIPS

ಚೀನಾ ಗಡಿ ವಿಚಾರ | 3 ತತ್ವಗಳಡಿಯೇ ಮಾತುಕತೆ: ಸಚಿವ ಜೈಶಂಕರ್

ನವದೆಹಲಿ: ಚೀನಾಗೆ ಹೊಂದಿಕೊಂಡಿರುವ ಗಡಿ ವಿಚಾರವಾಗಿ ಭಾರತದ ನಿಲುವು ದೃಢವಾಗಿದೆ. ಉಭಯ ದೇಶಗಳ ನಡುವಿನ ಮಾತುಕತೆ ಮೂರು ಪ್ರಮುಖ ತತ್ವಗಳಡಿಯೇ ನಡೆಯಬೇಕು ಎಂಬುದು ಭಾರತದ ಸ್ಪಷ್ಟ ನಿಲುವಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಮಂಗಳವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಈ ಕುರಿತ ಚರ್ಚೆ ವೇಳೆ, ಅವರು ಈ ಹೇಳಿಕೆ ನೀಡಿದ್ದಾರೆ.

'ವಾಸ್ತವ ನಿಯಂತ್ರಣ ರೇಖೆಯನ್ನು(ಎಲ್‌ಎಸಿ) ಎರಡೂ ದೇಶಗಳು ಗೌರವಿಸಬೇಕು ಹಾಗೂ ಅದರ ಮೇಲೆ ನಿಗಾ ಇಡಬೇಕು ಎಂಬುದು ಮೊದಲ ತತ್ವ. ಗಡಿಯಲ್ಲಿನ ಯಥಾಸ್ಥಿತಿಯನ್ನು ಬದಲಿಸಲು ಚೀನಾ ಅಥವಾ ಭಾರತವಾಗಲಿ ಏಕಪಕ್ಷೀಯವಾಗಿ ಯತ್ನಿಸಬಾರದು ಎಂಬುದು ಎರಡನೇ ತತ್ವ ಹಾಗೂ ಉಭಯ ದೇಶಗಳು ಈ ಹಿಂದೆ ಅಗಿರುವ ಒಪ್ಪಂದಗಳನ್ನು ಪಾಲನೆ ಮಾಡಬೇಕು ಎಂಬುದು ಮೂರನೇ ತತ್ವವಾಗಿದೆ' ಎಂದು ಜೈಶಂಕರ್‌ ಸದನಕ್ಕೆ ತಿಳಿಸಿದ್ದಾರೆ.

'ಗಡಿ ವಿಚಾರದಲ್ಲಿ ಬಾಕಿ ಇರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಚೀನಾ ಜೊತೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ. ಚೀನಾ ಜೊತೆಗಿನ ಸಂಬಂಧವು ಆ ದೇಶ ಎಷ್ಟರ ಮಟ್ಟಿಗೆ ಎಲ್‌ಎಸಿ ಪಾವಿತ್ರ್ಯ ಗೌರವಿಸುತ್ತದೆ ಎಂಬುದರ ಮೇಲೆ ಅವಲಂಬಿಸಿದೆ' ಎಂದು ಜೈಶಂಕರ್‌ ಹೇಳಿದರು.

'ಪೂರ್ವ ಲಡಾಖ್‌ ಗಡಿಯಲ್ಲಿನ ಡೆಪ್ಸಾಂಗ್‌ ಮತ್ತು ಡೆಮ್‌ಚೊಕ್‌ಗಳಿಂದ ಉಭಯ ದೇಶಗಳು ಸೈನಿಕರನ್ನು ವಾಪಸು ಕರೆಸಿಕೊಳ್ಳುವ ಪ್ರಕ್ರಿಯೆ ಹಂತಹಂತವಾಗಿ ನಡೆದಿದ್ದರೂ, ಪೂರ್ಣ ಪ್ರಮಾಣದಲ್ಲಿ ಮುಗಿದಿದೆ. ಈಗ, ಕಾರ್ಯಸೂಚಿಯ ಭಾಗವಾಗಿರುವ ಉಳಿದ ವಿಚಾರಗಳ ಕುರಿತು ಮಾತುಕತೆ ಆರಂಭವನ್ನು ಭಾರತ ಎದುರು ನೋಡುತ್ತಿದೆ' ಎಂದು ಹೇಳಿದ್ದಾರೆ.

ಡೆಪ್ಸಾಂಗ್ ಮತ್ತು ಡೆಮ್‌ಚೊಕ್‌ನಲ್ಲಿ ಯೋಧರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ವಿಚಾರದಲ್ಲಿ ಚೀನಾದೊಂದಿಗೆ ಅಕ್ಟೋಬರ್ 21ರಂದು ಮಾಡಿಕೊಂಡಿರುವ ಒಪ್ಪಂದ ಬಗ್ಗೆಯೂ ಜೈಶಂಕರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

ಜೈಶಂಕರ್ ಹೇಳಿದ್ದು

  • ಎಲ್‌ಎಸಿ ಉದ್ದಕ್ಕೂ ಸಂಘರ್ಷವನ್ನು ಕಡಿಮೆ ಮಾಡುವುದು ನಮ್ಮ ಮುಂದಿನ ಆದ್ಯತೆ. ಇದು ಗಡಿಯಲ್ಲಿ ಸೇನೆಯ ಹೆಚ್ಚುವರಿ ತುಕಡಿಗಳನ್ನು ನಿಯೋಜನೆಗೆ ಕಡಿವಾಣ ಹಾಕಲಿದೆ

  • ಗಡಿ ವಿಚಾರವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಉದ್ಭವಿಸಿದ್ದ ಉದ್ವಿಗ್ನತೆಯಿಂದ ಎರಡೂ ದೇಶಗಳು ಪಾಠ ಕಲಿತಿವೆ. ಇದು ಗಡಿ ನಿರ್ವಹಣೆಯಲ್ಲಿ ಮತ್ತಷ್ಟು ಎಚ್ಚರಿಕೆ ಅಗತ್ಯ ಎಂಬುದನ್ನು ಸಾರಿವೆ

  • ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಭಾರತ ಒತ್ತು ನೀಡುತ್ತದೆ. ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲಸುವುದು ಈ ಉದ್ದೇಶ ಈಡೇರಿಕೆಗೆ ಪೂರಕವಾಗಲಿದೆ

  • ದೇಶದ ಸುರಕ್ಷತೆ ಹಾಗೂ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮುಂದಿನ ದಿನಗಳಲ್ಲಿ ಚೀನಾದೊಂದಿಗೆ ಭಾರತ ಮಾತುಕತೆ ನಡೆಸುವುದಕ್ಕೆ ಗಡಿಯಿಂದ ಸೇನೆ ಹಿಂದಕ್ಕೆ ಕರೆಸಿಕೊಂಡಿರುವ ನಡೆ ನೆರವಾಗಲಿದೆ

  • ಸಿಬ್ಬಂದಿ ಹಾಗೂ ಶಸ್ತ್ರಾಸ್ತ್ರಗಳ ಸಾಗಣೆ ವಿಷಯದಲ್ಲಿ ಸಾಕಷ್ಟು ಸವಾಲುಗಳು ಎದುರಾಗಿದ್ದವು ಕೋವಿಡ್‌-19 ಪಿಡುಗು ಕೂಡ ಇತ್ತು. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಗಡಿ ರಕ್ಷಣೆ ಮಾಡಿದ ನಮ್ಮ ಸಶಸ್ತ್ರ ಪಡೆಗಳಿಗೆ ಶ್ರೇಯ ಸಲ್ಲಬೇಕು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries