HEALTH TIPS

ಅತಿಯಾಗಿ ಕೂದಲು ಉದುರುತಿದ್ಯಾ? ವಾರದಲ್ಲಿ 3 ಬಾರಿ ಈ ರೀತಿ ಎಲೆಗಳ ಪೇಸ್ಟ್ ಬಳಸಿ..!

 ಸಾಮಾನ್ಯವಾಗಿ ಇಂದಿನ ಯುವ ಪೀಳಿಗೆಯ ಒತ್ತಡದಲ್ಲೇ ಜೀವನ ನಡೆಸುವಂತಾಗಿದೆ. ಅದ್ರಲ್ಲು ಅವರಲ್ಲು ಹಲವು ರೀತಿಯ ಸಮಸ್ಯೆಗಳು ಎದುರಿಸುತ್ತಿರುತ್ತಾರೆ. ಅಂತಹ ಸಮಸ್ಯೆಗಳಲ್ಲಿ ತೂಕ ಹೆಚ್ಚಳವಾಗುವುದು, ನಿದ್ರೆಯ ಸಮಸ್ಯೆ ಸೇರಿ ಕೂದಲು ಉದುರುವುದು ಕೂಡ ಒಂದಾಗಿದೆ. ಈಗ ವಯಸ್ಸಾಗುವ ಮುನ್ನವೇ ಕೂದಲು ಉದುರುವುದು ಯುವಕ ಯುವತಿಯರ ಹೊಸ ಸಮಸ್ಯೆಯಾಗಿ ತಿರುಗಿದೆ.

ಮದುವೆಗೂ ಮುನ್ನವೇ ಯುವಕ ಯುವತಿಯರಲ್ಲಿ ಕೂದಲು ಉದುರುವುದು. ತಲೆ ಬೋಳಾಗುವುದು, ಕೂದಲು ತೆಳುವಾಗುವಂತಹ ಸಮಸ್ಯೆಗಳ ಎದುರಿಸುವುದು ನಾವು ನೋಡಿರುತ್ತೇವೆ. ಹಾಗೆ ಕೂದಲಿಗೆ ಸಂಬಂಧಿಸಿದ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವುದು ಕೂಡ ನಾವು ನೋಡಿರುತ್ತೇವೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವು ರೀತಿಯ ಔಷಧಿ ಬಳಸುವುದು ನೋಡಿರುತ್ತೇವೆ.


ಆದ್ರೆ ಈ ದುಬಾರಿ ವಸ್ತುಗಳ ಬಳಸಿಕೊಂಡು ನಾವು ಔಷಧಿ ಮಾಡುವ ಬದಲಾಗಿ ನಾವು ಮನೆಯಲ್ಲೇ ಕೆಲವು ಔಷಧಿಗಳ ಬಳಸುವುದರಿಂದ ಈ ಕೂದಲು ಉದುರುವಿಕೆಯ ತಡೆಗಟ್ಟಬಹುದು, ವಾರದಲ್ಲಿ 2 ಬಾರಿ ಎಲೆಗಳಿಂದ ಮಾಡಿರುವ ಈ ಮನೆಮದ್ದು ಬಳಸಿದರೆ ಕೂದಲು ಉದುರುವಿಕೆಯಿಂದ ಪಾರಾಗಬಹುದು. ಹಾಗಾದ್ರೆ ಯಾವ ಗಿಡಮೂಲಿಕೆ ಮೂಲಕ ಈ ರೀತಿಯ ಔಷಧಿ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.


ಕಬೇವಿನ ಎಲೆಗಳು

ಕರಿಬೇವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಉತ್ತಮ ಪರಿಮಳಕ್ಕಾಗಿ ಮಾತ್ರವಲ್ಲದೆ ಇದು ಬೀಟಾ-ಕ್ಯಾರೋಟಿನ್, ಪ್ರೋಟೀನ್‌ನಂತಹ ಪೋಷಕಾಂಶಗಳನ್ನು ಒಳಗೊಂಡಿರುತ್ತದೆ. ಇದು ಕೂದಲ ಬುಡವನ್ನು ಬಲಪಡಿಸಿ ಕೂದಲು ಉದುರುವುದನ್ನು ತಡೆಯುತ್ತದೆ. ಇದಕ್ಕಾಗಿ ಕರಿಬೇವಿನ ಸೊಪ್ಪನ್ನು ರುಬ್ಬಿ ಪೇಸ್ಟ್ ಮಾಡಿ ತಲೆಗೆ ಹಚ್ಚಿ ನೆನೆಯಲು ಬಿಡಿ ನಂತರ ತಣ್ಣೀರಿನಿಂದ ತೊಳೆಯಿರಿ. ವಾರಕ್ಕೆ 1-2 ಬಾರಿ ಹೀಗೆ ಮಾಡಿದರೆ ಕೂದಲು ಉದುರುವಿಕೆಯನ್ನು ತಡೆಗಟ್ಟಬಹುದು.

ಆಲೋವೆರಾ

ಅಲೋವೆರಾ ಹಲವಾರು ಔಷಧೀಯ ಗುಣಗಳನ್ನು ಹೊಂದಿದೆ. ಈ ಅಲೋವೆರಾ ಜೆಲ್‌ನಲ್ಲಿರುವ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲೋವೆರಾ ಜೆಲ್ ಅನ್ನು ನೆತ್ತಿಗೆ ಹಚ್ಚಿಕೊಂಡು 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ತಣ್ಣೀರಿನಲ್ಲಿ ತೊಳೆಯಬೇಕು, ಇದೇ ರೀತಿ ವಾರದಲ್ಲಿ ಎರಡು ಬಾರಿ ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆಯ ತಡೆಗಟ್ಟಬಹುದು.

ಬೇವು

ಬೇವು ಬ್ಯಾಕ್ಟೀರಿಯಾ ವಿರೋಧಿ ಮತ್ತು ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ಬೇವಿನ ಎಲೆಗಳನ್ನು ತಲೆಗೆ ಹಚ್ಚಿದರೆ ಕೂದಲು ಉದುರುವ ನೆತ್ತಿಯ ಸೋಂಕನ್ನು ನಿವಾರಿಸುತ್ತದೆ. 1 ಹಿಡಿ ಬೇವಿನ ಎಲೆಗಳನ್ನು ನೀರಿನಲ್ಲಿ ಕುದಿಸಿ, ನೀರನ್ನು ಫಿಲ್ಟರ್ ಮಾಡಿ ಮತ್ತು ನಂತರ ನೀರಿನಿಂದ ನಿಮ್ಮ ಕೂದಲನ್ನು ತೊಳೆದುಕೊಳ್ಳಬೇಕು, ಈ ರೀತಿ ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿ ನೋಡಿ ಫಲಿತಾಂಶ ನಿಮ್ಮ ಮುಂದೆ ಇರಲಿದೆ.

ಮೆಂತ್ಯ

ಮೆಂತ್ಯ ಕಾಳುಗಳು ಉತ್ತಮ ತಂಪಿನ ಗುಣ ಹಾಗೂ ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿದೆ. ಇದು ನಿಕೋಟಿನಿಕ್ ಆಮ್ಲ ಮತ್ತು ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿದೆ, ಇದು ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದಕ್ಕಾಗಿ ಮೆಂತ್ಯವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ, ಮರುದಿನ ಬೆಳಿಗ್ಗೆ ಅದನ್ನು ಪೇಸ್ಟ್ ಮಾಡಿಕೊಂಡು ತಲೆಗೆ ಹಚ್ಚಿಕೊಳ್ಳಬೇಕು. ನಂತರ ಕೆಲ ಸಮಯ ಹಾಗೆಯೇ ಬಿಟ್ಟು ನಂತರ ಚೆನ್ನಾಗಿ ತೊಳೆಯಬೇಕು. ಇದೇ ರೀತಿ ವಾರದಲ್ಲಿ ಎರಡು ಬಾರಿ ಮಾಡಿ. ಆದ್ರೆ ಈ ರೀತಿ ಮಾಡುವುದರಿಂದ ನಿಮಗೆ ನೆಗಡಿ, ಶೀತದಂತಹ ಲಕ್ಷಣ ಕಂಡುಬಂದರೆ ನಿಲ್ಲಿಸಿಬಿಡಿ.

ಪುದೀನ ಎಲೆಗಳು

ಪುದೀನ ಎಲೆಗಳು ತಂಪಾಗಿಸುವ ಗುಣಗಳನ್ನು ಹೊಂದಿವೆ ಮತ್ತು ಇದು ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಹೀಗಾಗಿ ಈ ಎಲೆಗಳನ್ನು ನೀರಿನೊಂದಿಗೆ ಮಿಕ್ಸಿಗೆ ಹಾಕಿ ರುಬ್ಬಿಕೊಂಡು ತಲೆಗೆ ಹಚ್ಚಿ ಸುಮಾರು 15 ನಿಮಿಷ ಬಿಟ್ಟು ತಲೆ ಸ್ನಾನ ಮಾಡಬೇಕು, ಇದು ನಿಮ್ಮ ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಲಿದೆ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries