ಕೊಚ್ಚಿ: ಕೊಚ್ಚಿನ್ ತಾಂತ್ರಿಕ ವಿಶ್ವವಿದ್ಯಾಲಯದ(ಕುಸಾಟ್) ಒಕ್ಕೂಟದ ಆಡಳಿತವು ಕೆಎಸ್‍ಯು ಪಾಲಾಗಿದೆ. ಬರೋಬ್ಬರಿ 31 ವರ್ಷಗಳ ನಂತರ ಕೆಎಸ್‍ಯು ವಿಶ್ವವಿದ್ಯಾಲಯದ ಒಕ್ಕೂಟದ ಆಡಳಿತ ಹಿಡಿದಿದೆ. ಅಧ್ಯಕ್ಷರಾಗಿ ಕೆಎಸ್ ಒಯುನ ಕುರಿಯನ್ ಬಿಜು ಆಯ್ಕೆಯಾದರು.
ಉಪಾಧ್ಯಕ್ಷರಾಗಿ ನವೀನ್ ಮ್ಯಾಥ್ಯೂ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಬಿ. ಅರ್ಚನಾ, ಜಂಟಿ ಕಾರ್ಯದರ್ಶಿಯಾಗಿ ಮೊಹಮ್ಮದ್ ರಶೀದ್ ಮತ್ತು ಖಜಾಂಚಿಯಾಗಿ ಬೇಸಿಲ್ ಎಂ ಪಾಲ್ ಆಯ್ಕೆಗೊಂಡಿರುವರು.
ಈ ಬಾರಿ ಎಂಎಸ್ ಎಫ್ ಹೊರತುಪಡಿಸಿ ಕೆಎಸ್ ಒಯು ಏಕಾಂಗಿಯಾಗಿ ಸ್ಪರ್ಧಿಸಿದೆ. ಕೆಎಸ್‍ಯು 15ರಲ್ಲಿ 13 ಸ್ಥಾನಗಳನ್ನು ಎಸ್‍ಎಫ್‍ಐಯಿಂದ ವಶಪಡಿಸಿಕೊಂಡಿದೆ.
ಆಂತರಿಕ ಕಲಹಗಳು ಮತ್ತು ಅಸ್ತಿತ್ವದಲ್ಲಿರುವ ಒಕ್ಕೂಟದ ಬಗ್ಗೆ ತೀವ್ರ ಅಸಮಾಧಾನದಿಂದಾಗಿ ಎಸ್‍ಎಫ್‍ಐ ಹಿನ್ನಡೆಯಾಗಿದೆ.