HEALTH TIPS

ಮಹಾಕುಂಭ ಮೇಳ | 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ: ಉತ್ತರ ಪ್ರದೇಶ ಡಿಸಿಎಂ

ಹೈದರಾಬಾದ್‌: ಮುಂದಿನ ವರ್ಷ (2025) ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ 'ಮಹಾಕುಂಭ ಮೇಳ'ದಲ್ಲಿ ಸುಮಾರು 45 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ತಿಳಿಸಿದ್ದಾರೆ.

ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದ ರೋಡ್‌ ಶೋನಲ್ಲಿ ಭಾಗವಹಿಸಿ ಮಾತನಾಡಿದ ಅವರು, 'ಮಹಾಕುಂಭ'ವು ದೇಶದ ವೈವಿಧ್ಯತೆಯೊಳಗಿನ ಏಕತೆಯ ವಿಶಿಷ್ಟ ಆಚರಣೆಯಾಗಿದ್ದು, ತಾವೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಜನರನ್ನು ಆಹ್ವಾನಿಸಿದರು.

'ಮೇಳದಲ್ಲಿ ಭಾಗವಹಿಸಲು ದೇಶ-ವಿದೇಶಗಳಿಂದ ಬರುವ ಲಕ್ಷಾಂತರ ಜನರಿಗೆ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸಲು ಉತ್ತರ ಪ್ರದೇಶ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದ 101 ಸ್ಥಳಗಳಲ್ಲಿ ಸ್ಮಾರ್ಟ್‌ ಪಾರ್ಕಿಂಗ್‌ ಸೌಲಭ್ಯಗಳನ್ನು ರಚಿಸಲಾಗಿದ್ದು, ಪ್ರತಿನಿತ್ಯ ಐದು ಲಕ್ಷ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ' ಎಂದು ಮೌರ್ಯ ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಮಾರ್ಗದರ್ಶನದಲ್ಲಿ ಉತ್ತರ ಪ್ರದೇಶದ 'ಡಬಲ್‌ ಎಂಜಿನ್‌' ಸರ್ಕಾರವು 'ಮಹಾಕುಂಭ ಮೇಳ'ವನ್ನು ಅಪರೂಪದ ಮತ್ತು ಐತಿಹಾಸಿಕ ಕ್ಷಣವನ್ನಾಗಿ ಮಾಡಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ.

ಶುಕ್ರವಾರ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಅವರ ನಿವಾಸಕ್ಕೆ ಭೇಟಿ ನೀಡಿದ ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಅವರು 2025ರ ಜನವರಿಯಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ 'ಮಹಾಕುಂಭ' ಮೇಳದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದಾರೆ.

ಕುಂಭಮೇಳವು ಮುಂದಿನ ಜನವರಿ 13ರಂದು ಆರಂಭವಾಗಿ, ಫೆಬ್ರುವರಿ 26ಕ್ಕೆ ಮುಕ್ತಾಯಗೊಳ್ಳುವುದು. ಈ ವೇಳೆ, ಭಕ್ತಾದಿಗಳು ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ಸಂಗಮ ಸ್ಥಳದಲ್ಲಿ 'ಪುಣ್ಯ ಸ್ನಾನ' ವಿಧಿ ಪೂರೈಸುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries