HEALTH TIPS

ಕುಂದುಕೊರತೆ ನಿವಾರಣಾ ಅದಾಲತ್- ಜಿಲ್ಲೆಯಲ್ಲಿ ಇದುವರೆಗೆ 484 ದೂರುಗಳ ಸ್ವೀಕಾರ

ಕಾಸರಗೋಡು: ಸಾರ್ವಜನಿಕರ ಕುಂದುಕೊರತೆಗಳನ್ನು ನಿವಾರಿಸಲು ಸಚಿವರ ನೇತೃತ್ವದಲ್ಲಿ ತಾಲೂಕುಮಟ್ಟದಲ್ಲಿ ಆಯೋಜಿಸಿರುವ ಕುಂದುಕೊರತೆ ನಿವಾರಣಾ ಅದಾಲತ್‍ನಲ್ಲಿ ದೂರುಗಳ ಸ್ವೀಕಾರ ಮುಂದುವರಿದಿದೆ. ಜಿಲ್ಲೆಯಲ್ಲಿ ಈವರೆಗೆ 484 ದೂರುಗಳು ಲಭಿಸಿದೆ. ತಾಲೂಕು ಆಧಾರದಲ್ಲಿ ಬಂದಿರುವ ದೂರುಗಳ ಸಂಖ್ಯೆ ಹೊಸದುರ್ಗ 174, ಕಾಸರಗೋಡು 140, ವೆಳ್ಳರಿಕುಂಡ್ 86, ಮಂಜೇಶ್ವರದಿಂದ 84 ದೂರು ಲಭ್ಯವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಡಿಸೆಂಬರ್ 28 ರಿಂದ ಜನವರಿ 6 ರವರೆಗೆ ತಾಲೂಕುಮಟ್ಟದ ಅದಾಲತ್ ನಡೆಯಲಿದೆ.ಪ್ರಾಚ್ಯವಸ್ತು ಮತ್ತು ನೋಂದಣಿ ಖಾತೆ ಸಚಿವ ರಾಮಚಂದ್ರನ್ ಕಡನ್ನಪಲ್ಲಿ, ಕ್ರೀಡಾ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ವಿ ಅಬ್ದುಲ್ ರಹಮಾನ್ ಅದಾಲತ್‍ನ ನೇತೃತ್ವ ವಹಿಸಲಿದ್ದಾರೆ. ಜಿಲ್ಲೆಯಲ್ಲಿ ಡಿ.23ರವರೆಗೆ ಅದಾಲತ್‍ಗೆ ದೂರು ಸಲ್ಲಿಸಬಹುದಾಗಿದೆ.


ಅದಾಲತ್ ಸ್ಥಳಗಳು:

ಡಿಸೆಂಬರ್ 28 ರಂದು ಕಾಸರಗೋಡು ತಾಲೂಕು ಮಟ್ಟದ ಅದಾಲತ್ ಕಾಸರಗೋಡು ನಗರಸಭಾ ಪುರಭವನ ಹಾಗೂ ಜನವರಿ 3ರಂದು ಹೊಸದುರ್ಗ ತಾಲೂಕು ಅದಾಲತ್ ಕಾಞಂಗಾಡ್ ನಗರಸಭಾ ಭವನ ಹಾಗೂ ಜನವರಿ 4ರಂದು ಮಂಜೇಶ್ವರ ತಾಲೂಕು ಅದಾಲತ್ ಉಪ್ಪಳ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ  ನಡೆಯಲಿದೆ. ಜನವರಿ 6ರಂದು   ವೆಳ್ಳರಿಕುಂಡ್ ತಾಲೂಕು ಅದಾಲತ್ ದರ್ಶನ ಸಭಾಂಗಣದಲ್ಲಿ ನಡೆಯಲಿದೆ. ಅದಾಲತ್‍ನಲ್ಲಿ ಪರಿಗಣನೆಗೆ ಕುಂದುಕೊರತೆಗಳನ್ನು ಕಛೇರಿಗಳಲ್ಲಿ ಮತ್ತು ಅಕ್ಷಯ ಕೇಂದ್ರಗಳಲ್ಲಿ ರಿಸರ್ವ್ ಪೆÇೀರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ಸಲ್ಲಿಸಬಹುದು. ದೂರಿನಲ್ಲಿ ದೂರುದಾರರ ಹೆಸರು, ವಿಳಾಸ, ಇಮೇಲ್, ಮೊಬೈಲ್ ಸಂಖ್ಯೆ, ವಾಟ್ಸಪ್ ಸಂಖ್ಯೆ, ಜಿಲ್ಲೆ, ತಾಲೂಕು, ದೂರಿನ ತನಿಖೆ ನಡೆದಿರುವ ಕಚೇರಿ ಮತ್ತು ಕಡತ ಸಂಖ್ಯೆಯನ್ನು ಒಳಗೊಂಡಿರಬೇಕು. ಅದಾಲತ್‍ನಲ್ಲಿ ಪರಿಗಣನೆಗೆ ನಿಗದಿಪಡಿಸಿದ ವಿಷಯಗಳ ಮೇಲೆ ಮಾತ್ರ ದೂರುಗಳನ್ನು ಸಲ್ಲಿಸಬೇಕಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries