ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದ್ದು, ಚಳಿಯಿಂದ ಜನ ತತ್ತರಿಸಿದ್ದಾರೆ.
ಅಯನಗರ ಹಾಗೂ ಪುಸ ಪ್ರದೇಶದಲ್ಲಿ ಶೀತಗಾಳಿ ಇದ್ದು ಅಲ್ಲಿ ತಾಪಮಾನ ಕ್ರಮವಾಗಿ 3.8 ಹಾಗೂ 3.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇದು ಈ ಋತುವಿನಲ್ಲಿ ದಾಖಲಾದ ಕನಿಷ್ಠ ತಾಪಮಾನ.
ಬುಧವಾರ ದೆಹಲಿಯ ಕನಿಷ್ಠ ತಾಪಮಾನ 4.9 ಡಿಗ್ರಿ ಸೆಲ್ಸಿಯಸ್ ಇತ್ತು. ಡಿಸೆಂಬರ್ ಆರಂಭದಲ್ಲಿ 5 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು 14 ವರ್ಷದಲ್ಲಿ ದಾಖಲಾದ ಕನಿಷ್ಠ ತಾಪಮಾನ ಎಂದು ಭಾರತೀಯ ಹವಾಮಾನ ಕೇಂದ್ರ ತಿಳಿಸಿದೆ.
ದತ್ತಾಂಶಗಳ ಪ್ರಕಾರ 1987 ಡಿಸೆಂಬರ್ 6 ರಂದು 4.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈವರೆಗಿನ ಕನಿಷ್ಠ.
ಸೂರ್ಯ ಏರುತ್ತಿದ್ದಂತೆಯೇ ತಿಳಿಯಾಕಾಶ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಗರಿಷ್ಠ ತಾಪಮಾನ 23 ಡಿಗ್ರಿ ಇರಬಹುದು ಎಂದು ಅಂದಾಜಿಸಿದೆ.