ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಪೋಲಿಯೊದ ನಾಲ್ಕು ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಈ ವರ್ಷ ವರದಿಯಾದ ಪೋಲಿಯೊ ಪ್ರಕರಣಗಳ ಸಂಖ್ಯೆ 63ಕ್ಕೆ ಏರಿದಂತಾಗಿದೆ.
ಕಳೆದ ವರ್ಷ 6 ಪ್ರಕರಣಗಳು ವರದಿಯಾಗಿದ್ದವು. ದೇಶದಾದ್ಯಂತ ಪೋಲಿಯೊ ಲಸಿಕೆ ಕಾರ್ಯಕ್ರಮ ಹಮ್ಮಿಕೊಂಡಿದ್ದರೂ, ಖೈಬರ್ ಪಂಖ್ತುಂಖ್ವ ಮತ್ತು ಸಿಂಧ್ ಪ್ರಾಂತ್ಯಗಳಲ್ಲಿ ಶುಕ್ರವಾರ ತಲಾ ಎರಡು ಹೊಸ ಪ್ರಕರಣಗಳು ಪತ್ತೆಯಾಗಿವೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಈ ವರ್ಷ ವರದಿಯಾಗಿರುವ ಒಟ್ಟು 63 ಪ್ರಕರಣಗಳ ಪೈಕಿ, ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗರಿಷ್ಠ 26 ಪ್ರಕರಣಗಳು ವರದಿಯಾಗಿವೆ. ಖೈಬರ್‌ಪಂಖ್ವುಂಖ್ವದಲ್ಲಿ 18, ಸಿಂಧ್‌ನಲ್ಲಿ 17, ಪಂಜಾಬ್ ಪ್ರಾಂತ್ಯ ಮತ್ತು ಇಸ್ಲಾಮಾಬಾದ್‌ನಲ್ಲಿ ತಲಾ ಒಂದು ಪ್ರಕರಣ ಪತ್ತೆಯಾಗಿವೆ ಎಂದು ರಾಷ್ಟ್ರೀಯ ತುರ್ತು ಕಾರ್ಯಾಚರಣೆಗಳ ಕೇಂದ್ರ (ಎನ್‌ಇಒಸಿ) ತಿಳಿಸಿದೆ.