ತಿರುವನಂತಪುರಂ: ಕೇರಳ ವಿಶ್ವವಿದ್ಯಾನಿಲಯ ಕೇಂದ್ರ ಕಚೇರಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸಿದ ಎಸ್‍ಎಫ್‍ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ನಾಲ್ವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಆದರ್ಶ್, ಅವಿನಾಶ್, ಜಯಕೃಷ್ಣನ್ ಮತ್ತು ಅನಂತು ಬಂಧಿತರು. ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು.
ವಿಶ್ವವಿದ್ಯಾನಿಲಯದಲ್ಲಿ ನಡೆದ ಧರಣಿಯಲ್ಲಿ ರಾಜ್ಯ ನಾಯಕರು ಸೇರಿದಂತೆ 100ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ರಾಜ್ಯಾಧ್ಯಕ್ಷೆ ಅನುಶ್ರೀ ವಿರುದ್ಧ ಕಂಟೋನ್ಮೆಂಟ್ ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್‍ಎಫ್‍ಐ ಕಾರ್ಯಕರ್ತರು ಪೋಲೀಸ್ ಬಂದೋಬಸ್ತ್ ಭೇದಿಸಿ ಗೇಟ್ ದಾಟಿ ಪ್ರತಿಭಟನೆ ನಡೆಸಿದ್ದರು. ಅವರನ್ನು ಬಂಧಿಸಿ ಸ್ಥಳದಿಂದ ಹೊರ ಕರೆದೊಯ್ಯದ ಪೋಲೀಸರನ್ನು ರಾಜ್ಯಪಾಲರು ತೀವ್ರವಾಗಿ ಟೀಕಿಸಿದ್ದರು.