ತಿರುವನಂತಪುರಂ: ಹೈಕೋರ್ಟ್‍ನ ಅನುಮತಿಯೊಂದಿಗೆ ತಿರುವಾಂಕೂರು ದೇವಸ್ವಂ ಮಂಡಳಿಯ ಎಂಟು ತಿಂಗಳ ಸುದೀರ್ಘ ತಪಾಸಣೆ ಮತ್ತು ಎಣಿಕೆ ಪೂರ್ಣಗೊಂಡಿದೆ.
ಹೂಡಿಕೆ ಯೋಜನೆಯಡಿ ಶಬರಿಮಲೆ ಸೇರಿದಂತೆ ದೇವಸ್ವಂಬೋರ್ಡ್ ದೇವಸ್ಥಾನಗಳಲ್ಲಿ ದಿನನಿತ್ಯದ ಬಳಕೆಯಲ್ಲಿ ಇಲ್ಲದ 535 ಕೆಜಿ ಚಿನ್ನವನ್ನು ಜನವರಿ ಮಧ್ಯದೊಳಗೆ ಎಸ್ ಬಿಐಗೆ ಹಸ್ತಾಂತರಿಸಲಾಗುವುದು.
ತಿರುವಾಂಕೂರು ದೇವಸ್ವಂ ಮಂಡಳಿಯ 1252 ದೇವಸ್ಥಾನಗಳ ಚಿನ್ನವನ್ನು 21 ಸ್ಟ್ರಾಂಗ್ ರೂಂಗಳಲ್ಲಿ ಇರಿಸಲಾಗಿದೆ. ಇವು ಭಕ್ತರು ಕಾಣಿಕೆ ರೂಪದಲ್ಲಿ ನೀಡಿದ ಮತ್ತು ಪ್ರದರ್ಶಿಸುವ ಆಭರಣಗಳಾಗಿವೆ.
ಈಗಿನ ಚಿನ್ನದ ಬೆಲೆಯ ಪ್ರಕಾರ ವಾರ್ಷಿಕ ಸುಮಾರು 10 ಕೋಟಿ ರೂಪಾಯಿ ಬಡ್ಡಿ ಸಿಗಲಿದೆ. ದೇವಸ್ವಂ ಮಂಡಳಿ ಸಭೆಯು ಐದು ವರ್ಷಗಳ ಹೂಡಿಕೆ ಯೋಜನೆಗೆ ಅಂತಿಮ ಅನುಮೋದನೆ ನೀಡಿದೆ.
ಜ.3ರಂದು ಎಸ್ ಬಿಐ, ದೇವಸ್ವಂ ಮಂಡಳಿ ಪ್ರತಿನಿಧಿಗಳು ಹಾಗೂ ಲೆಕ್ಕ ಪರಿಶೋಧನಾ ಇಲಾಖೆ ಅಧಿಕಾರಿಗಳು ಸಭೆ ನಡೆಸಲಿದ್ದಾರೆ ಎಂದು ದೇವಸ್ವಂ ಅಧ್ಯಕ್ಷ ಪಿ. ಪ್ರಶಾಂತ್ ಹಾಗೂ ಸದಸ್ಯರಾದ ಎ. ಅಜಿಕುಮಾರ್ ಹೇಳಿದ್ದಾರೆ.
ನಂತರ ಚಿನ್ನವನ್ನು ಸ್ಟ್ರಾಂಗ್ ರೂಮ್‍ಗಳಿಂದ ತಿರುವನಂತಪುರಂ ಶ್ರೀಕಂಠೇಶ್ವರಂ ಗ್ರೂಪ್‍ನ ವಲಿಯಶಾಲೆಗೆ ತೆಗೆದುಕೊಂಡು ಹೋಗಲಾಗುವುದು. ಮೆಟಲ್ಸ್ ಮತ್ತು ಮಿನರಲ್ಸ್ ಟ್ರೇಡಿಂಗ್ ಕಾಪೆರ್Çರೇಷನ್ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಂಕಿನ ತ್ರಿಶೂರ್ ಶಾಖೆಗೆ ಹಸ್ತಾಂತರಿಸಲಾಗುವುದು.