ಹಸಿ ಹಾಲು ಕುಡಿಯುವುದು ಮೂರ್ಖತನ ಏಕೆಂದರೆ ಅದರಲ್ಲಿ ಹಲವಾರು ಬ್ಯಾಕ್ಟೀರಿಯಾಗಳು ಇರಬಹುದು, ಅವುಗಳಲ್ಲಿ ಕೆಲವು ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಕೇರಳದ ಕೊಚ್ಚಿಯಲ್ಲಿರುವ ಗ್ಯಾಸ್ಟ್ರೋಎಂಟರಾಲಜಿಸ್ಟ್ ಮತ್ತು ವೈಜ್ಞಾನಿಕ ಸಮುದಾಯದ ಸಂಚಾಲಕ ಡಾ.ರಾಜೀವ್ ಜಯದೇವನ್ ಹೇಳಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಸ್ಟ್ಯಾನ್‌ಫೋರ್ಡ್ ಅಧ್ಯಯನದ ಪ್ರಕಾರ, ಇನ್ಫ್ಲುಯೆನ್ಸ ಅಥವಾ ಫ್ಲೂ ವೈರಸ್ ಐದು ದಿನಗಳವರೆಗೆ ಫ್ರಿಡ್ಜ್‌ನಲ್ಲಿಟ್ಟ ಹಾಲಿನಲ್ಲಿ 5 ದಿನಗಳ ಕಾಲ ಬದುಕುಳಿಯಲಿದೆ. ಜಾನುವಾರುಗಳಲ್ಲಿ ಇನ್ಫ್ಲುಯೆನ್ಸ ವೈರಸ್ ವಿಭಿನ್ನ ರೂಪಾಂತರವಾಗಿದ್ದು, ಅದು ಸಂಭಾವ್ಯ ಹರಡುವಿಕೆ ಹಾಗೂ ಸಾಂಕ್ರಾಮಿಕದ ಕಳವಕ್ಕೆ ಕಾರಣವಾಗಿದೆ ಎಂದು ತಿಳಿಸಿದೆ.
ಹಸಿ ಹಾಲಿನಲ್ಲಿ ಇ.ಕೋಲಿ, ಸಾಲ್ಮೊನೆಲ್ಲಾ, ಲಿಸ್ಟೇರಿಯಾ ಮತ್ತು ಕ್ಯಾಂಪಿಲೋಬ್ಯಾಕ್ಟರ್‌ನಂತಹ ಹಾನಿಕಾರಕ ಬ್ಯಾಕ್ಟೀರಿಯಾ ಸುಲಭವಾಗಿ ಬದುಕಬಹುದು. ಹಾಗೆ ಈ ಹಸಿ ಹಾಲಿನ ಸೇವನೆಯ ಬದಲು ಹಾಲನ್ನು ಬಿಸಿ ಮಾಡುವುದರಿಂದ ಈ ಎಲ್ಲಾ ವೈರಸ್‌ಗಳನ್ನು ಕೊಲ್ಲಬಹುದಾಗಿದೆ. ಕುದಿಸಿ ಕುಡಿಯುವ ಹಾಲು ಹಾನಿಕಾರಕ ವೈರಸ್ ಮುಕ್ತವಾಗಿರಲಿದೆ.
ಭಾರತದಲ್ಲಿ ಇದರ ಅಪಾಯ ಎಷ್ಟು?
ಭಾರತ ಜಾಗತಿಕವಾಗಿ ಹಾಲಿನ ಉತ್ಪನ್ನ ಹಾಗೂ ಡೈರಿ ಉತ್ಪನ್ನ ತಯಾರಿಕಾ ದೇಶಗಳಲ್ಲಿ ಪ್ರಮುಖವಾಗಿದೆ. ಭಾರತದಲ್ಲಿ ನಿತ್ಯ ಬೆಳಗ್ಗೆ ಹಾಲು, ಟೀ,ಕಾಫಿಯೊಂದಿಗೆ ದಿನ ಆರಂಭವಾಗಲಿದೆ. ಗ್ರಾಮೀಣ ಭಾಗದಲ್ಲಿ ಪಾಶ್ಚರೀಕರಿಸಿದ ಹಾಲಿನ ಬದಲಾಗಿ ಕಚ್ಚಾ ಹಾಲು ಬಳಕೆಯಲ್ಲಿದೆ. ಇದು ಕೂಡ ಅಪಾಯ ಹೆಚ್ಚಿಸುವ ಅಂಶಗಳಲ್ಲಿ ಒಂದಾಗಿದೆ.