ಕಾಸರಗೋಡು: ನಗರದ ತಳಂಗರೆಯ ಮನೆಯೊಂದರಲ್ಲಿ ಸಊಕ್ತ ದಾಖಲೆಗಳಿಲ್ಲದೆ ದಾಸ್ತಾನಿರಿಸಿದ್ದ 6.35ಲಕ್ಷ ರೂ. ನಗದು ನಗರಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿ ಅನಧಿಕೃತವಾಗಿ ನಗದು ದಾಸ್ತಾನಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕಾರ್ಯಾಚರಣೆ ನಡೆಸಲಾಗಿದೆ. ಮನೆಯಿಂದ ನಗದು ಅಲ್ಲದೆ ನೋಟು ಎಣಿಕೆ ಯಂತ್ರವನ್ನೂ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಪತ್ತೆಯಾಗಿಲ್ಲ.
ಕಾರಿನಲ್ಲಿ ಸಾಗಿಸುತ್ತಿದ್ದ 40ಲಕ್ಷ ರೂ. ವಶ:
ಸೂಕ್ತ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 40 ಲಕ್ಷ ರೂ. ನಗದು ಅಬಕಾರಿ ದಳ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಕೂಟುಪುಳ ಅಬಕಾರಿ ಚೆಕ್‍ಪೋಸ್ಟ್‍ನಲ್ಲಿ ಅಬಕಾರಿ ಇನ್ಸ್‍ಪೆಕ್ಟರ್ ರಾಜೇಶ್ ಕೋಮಾತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೈಸೂರು ಪಿರಿಯಾಪಟ್ಟಣ ನಿವಾಸಿ ಬಿ.ಎಸ್ ರಾಮಚಂದ್ರ ಹಾಗೂ ಕಾರಿನ ಚಾಲಕ ಬಂಧಿತರು.ಹಣ ಸಾಗಾಟಕ್ಕೆ ಬಳಸಿದ್ದ ಫೋರ್ಚುನರ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ.