ಕಾಸರಗೋಡು: ಕುಂಬಳೆ ಠಾಣಾ ವ್ಯಾಪ್ತಿಯ ಮೊಗ್ರಾಲ್ ಪೇರಾಳ್ ಪೊಟ್ಟೋರಿ ನಿವಾಸಿ ಅಬ್ದುಲ್ ಸಲಾಂ(22) ಅವರ ಕತ್ತು ಸೀಳಿ ಕೊಲೆಗೈದು ತಲೆಯನ್ನು ಫುಟ್‍ಬಾಲ್ ರೀತಿಯಲ್ಲಿ ಚೆಂಡಾಡಿದ ಪ್ರಕರಣದ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ಒಂದೂವರೆ ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಕಾಸರಗೋಡು ಜಿಲ್ಲಾ ಹೆಚ್ಚುವರಿ ಸತ್ರ (ದ್ವಿ) ನ್ಯಾಯಾಧೀಶೆ ಕೆ.ಪ್ರಿಯಾ ಈ ಶಿಕ್ಷೆ ವಿಧಿಸಿದ್ದಾರೆ. ಅಬ್ದುಲ್ ಸಲಾಂ ಅವರನ್ನು 2017 ಏ. 30ರಂದು ಮೊಗ್ರಾಲ್ ಮಾಳಿಯಂಗರ ಕೋಟೆ ಬಳಿ ಕತ್ತು ಸೀಳಿ ಕೊಲೆ ಮಾಡಲಾಗಿತ್ತು. ಕೊಲೆಗೈದು ಶರೀರದಿಂದ ಬೇರ್ಪಟ್ಟ ರುಂಡವನ್ನು ಫುಟ್‍ಬಾಲ್ ರೀತಿಯಲ್ಲಿ ಚೆಂಡಾಡಿರುವ ಬಗ್ಗೆಯೂ ಎಫ್‍ಐಆರ್‍ನಲ್ಲಿ ಉಲ್ಲೇಖಿಸಲಾಗಿತ್ತು. ಸಿದ್ದಿಕ್ (46), ಉಮರ್ ಫಾರೂಕ್ (36), ಜಹೀರ್ (36), ನಿಯಾಜ್ (38), ಹರೀಶ್ (36) ಮತ್ತು ಲತೀಫ್ (43) ಶಿಕ್ಷೆಗೊಳಗಾದವರು. ಕೊಲೆಯಾದ ಅಬ್ದುಲ್ ಸಲಾಂ ಕುಂಬಳೆ ಮತ್ತು ಕಾಸರಗೋಡು ಠಾಣೆಗಳಲ್ಲಿ ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದನು. ಪ್ರಕರಣದ ಅಪರಾಧಿ ಸಿದ್ದಿಕ್ ಮನೆಗೆ ನುಗ್ಗಿ ದಾಳಿ ನಡೆಸಿದ್ದ ವೈಷಮ್ಯದಲ್ಲಿ ಅಬ್ದುಲ್ ಸಲಾಂ ಹತ್ಯೆಗೈದಿರುವ ಬಗ್ಗೆ ಪೊಲೀಸರು ಕೇಸು ದಆಖಲಿಸಿಕೊಮಡಿದ್ದರು.
ಕುಂಬಳೆ ಠಾಣೆಯ ಅಂದಿನ ಇನ್ಸ್‍ಪೆಕ್ಟರ್, ಪ್ರಸಕ್ತ ಬೇಕಲ ಡಿವೈಎಸ್ಪಿಯಾಗಿರುವ ಮನೋಜ್ ವಿವಿ ನೇತೃತ್ವದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಎಸ್‍ಐ ಗೋಪಾಲನ್ ಜಯಶಂಕರ್, ಸ್ಕ್ವಾಡ್ ಸದಸ್ಯರಾದ ಬಾಲಕೃಷ್ಣನ್ ಮತ್ತು ನಾರಾಯಣನ್ ತನಿಖಾ ತಮಡದ ಸದಸ್ಯರಾಘಿದ್ದರು. ಪ್ರಾಸಿಕ್ಯೂಷನ್ ಪರವಾಗಿ ಜಿ.ಚಂದ್ರಮೋಹನ್ ಮತ್ತು ಚಿತ್ರಕಲಾ ವಾದ ಮಂಡಿಸಿದ್ದರು.