ಪತ್ತನಂತಿಟ್ಟ: ಶಬರಿಮಲೆ ಯಾತ್ರಾರ್ಥಿಗಳು ತೆರಳುತ್ತಿದ್ದ ಬಸ್ ಪಲ್ಟಿಯಾಗಿ ಮೂವರು ಗಾಯಗೊಂಡಿದ್ದಾರೆ. ತಮಿಳುನಾಡಿನ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಮುಂಡಕ್ಕಯಂನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
21 ಮಂದಿ ಪ್ರಯಾಣಿಕರಿದ್ದ ಬಸ್ ಚೆಂಗಲ್ ಪೇಟೆಯಿಂದ ಶಬರಿಮಲೆಗೆ ತೆರಳುತ್ತಿದ್ದ ವೇಳೆ ಪಲ್ಟಿಯಾಗಿ ಈ ಅವಘಡ ಸಂಭವಿಸಿದೆ. ಬಸ್ ಬ್ರೇಕ್ ಕಳೆದುಕೊಂಡು ರಸ್ತೆಯ ಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಕಿಲೋಮೀಟರ್ ದೂರದವರೆಗೆ ಬ್ರೇಕ್ ಕಳೆದುಕೊಂಡು ನಿಧಾನವಾಗಿ ಚಲಿಸುತ್ತಿದ್ದ ಬಸ್ ಪಲ್ಟಿಯಾಗಿದೆ.
ಬಸ್ಸಿನ ಬ್ರೇಕ್ ತಪ್ಪಿದ ವಿಷಯ ಚಾಲಕನಿಗೆ ತಿಳಿಯಿತು. ಚಾಲಕ ಇತರ ವಾಹನಗಳಿಗೆ ಢಿಕ್ಕಿಯಾಗದೆ ಬಸ್‍ನ ವೇಗವನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಆದರೆ ಸುರಕ್ಷಿತ ಸ್ಥಳ ಕಂಡುಬಂದಿರಲಿಲ್ಲ. ಆಗ ಬಸ್ ರಸ್ತೆಯ ಗೋಡೆಗೆ ಡಿಕ್ಕಿ ಹೊಡೆದು ನಿಲ್ಲಿಸಿ ನಂತರ ಪಲ್ಟಿಯಾಗಿದೆ.
ಅಪಘಾತದಿಂದಾಗಿ ಕೆ.ಕೆ.ರಸ್ತೆಯಲ್ಲಿ ಮೂರೂವರೆ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಬಸ್ ಮೇಲೆತ್ತಿ ಸ್ಥಳಾಂತರ ಮಾಡಿದ ನಂತರ ಸಂಚಾರ ಪುನರಾರಂಭವಾಯಿತು.