ಗಾಜಿಯಾಬಾದ್: ಮನೆಯೊಂದರ ಶೌಚಾಲಯದ ಪೈಪ್‌ನಲ್ಲಿ ಆರು ತಿಂಗಳ ಭ್ರೂಣವು ಪತ್ತೆಯಾಗಿದೆ.
'ನೀರಿನ ಒತ್ತಡದಿಂದಾಗಿ ಪೈಪ್ ಒಡೆದಾಗ ಅದರಲ್ಲಿ 6 ತಿಂಗಳ ಭ್ರೂಣವು ಪತ್ತೆಯಾಯಿತು' ಎಂದು ಮನೆಯ ಮಾಲೀಕ ದೇವೇಂದ್ರ ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳದಲ್ಲಿ ದೇವೇಂದ್ರ ಅವರು ಒಟ್ಟು 9 ಜನರಿಗೆ ಮನೆಗಳನ್ನು ಬಾಡಿಗೆ ನೀಡಿದ್ದಾರೆ.
ಭ್ರೂಣವನ್ನು ಶೌಚಾಲಯದಲ್ಲಿ ಎಸೆದಿರುವುದು ಯಾರು ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಭ್ರೂಣವನ್ನು ಸಂರಕ್ಷಿಸಿದ್ದೇವೆ. ಸ್ಥಳದಲ್ಲಿ ವಾಸಿಸುವ ಎಲ್ಲರನ್ನೂ ವಿಚಾರಣೆಗೊಳಪಡಿಸಲಾಗಿದ್ದು, ಬಾಡಿಗೆದಾರರು ಹಾಗೂ ಭ್ರೂಣದ ಡಿಎನ್‌ಎ ಪರೀಕ್ಷೆ ನಡೆಸುವ ಮೂಲಕ ಅಪರಾಧಿಗಳನ್ನು ಪತ್ತೆಹಚ್ಚುವುದಾಗಿ ಪೊಲೀಸರು ತಿಳಿಸಿದ್ದಾರೆ.