ಕಾಸರಗೋಡು: ಜಿಲ್ಲೆಯ ತಲಕ್ಲಾಯಿ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಈ ವರ್ಷದ ಷಷ್ಠಿ ಮಹೋತ್ಸವ ಡಿ.7ರಂದು ಜರುಗಲಿದೆ. ಬ್ರಹ್ಮಶ್ರೀ ಅರವತ್ ಕೆ.ಯು. ಪದ್ಮನಾಭ ತಂತ್ರಿ ನೇತೃತ್ವ ವಹಿಸುವರು.
7ರಂದು ಬೆಳಗ್ಗೆ 4ಕ್ಕೆ ಅಭಿಷೇಕ, ಉಷಾಪೂಜೆ ಮತ್ತು ಗಣಪತಿ ಹೋಮ, 1.30ಕ್ಕೆ ಶಿವೇಲಿ ಮಹೋತ್ಸವ, ಪಂಚವಾದ್ಯ, ಚೆಂಡಮೇಳ ನಂತರ ಶಿವಪುರ ಶಿವಕ್ಷೇತ್ರಕ್ಕೆ ಮೆರವಣಿಗೆ, ಸಂಜೆ 4ಕ್ಕೆ ತಿಡಂಬು ನೃತ್ಯ ನಡೆಯುವುದು. ಸಂಜೆ 6ಕ್ಕೆ ದೀಪಾರಾಧನೆ, ತಾಯಂಬಕ, ಭೋಜನ ಪೂಜೆ ರಾತ್ರಿ 8.30ಕ್ಕೆ ಶ್ರೀಭೂತಬಲಿ, ಚೆಂಡಮೇಳ, ವಸಂತ ಪೂಜೆ, ತಿಡಂಬುನೃತ್ಯ ನಡೆಯುವುದು. 8ರಂದು ಬೆಳಗ್ಗೆ 11ಕ್ಕೆ ಶ್ರೀ ರಕ್ತೇಶ್ವರಿ, ಗುಳಿಗ ದೈವ ನರ್ತನ ಸಏವೆ ನಡೆಯುವುದು.