ವಾರಾಣಸಿ: ವಾರಾಣಸಿಯ ಕಾಲೇಜೊಂದರ ಆವರಣದಲ್ಲಿರುವ ಮಸೀದಿ ಆವರಣದಲ್ಲಿ ಸಮಾಜ್ ಮಾಡುತ್ತಿದ್ದ ವೇಳೆ ಹನುಮಾನ್ ಚಾಲೀಸಾ ಪಠಣ ಮಾಡಿದ ಆರೋಪದ ವೇಳೆ ಏಳು ವಿದ್ಯಾರ್ಥಿಗಳನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
'ಕಾಲೇಜು ಆವರಣದ ಮಸೀದಿ ಬಳಿ ವಿದ್ಯಾರ್ಥಿಗಳು ನಮಾಜ್ ಮಾಡಿದರೆ ನಮಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ನಮಾಜ್ ಹೆಸರಲ್ಲಿ ಹೊರಗಿನವರು ಕಾಲೇಜು ಆವರಣ ಪ್ರವೇಶಿಸುವುದನ್ನು ನಾವು ಒಪ್ಪಿಕೊಳ್ಳುವುದಿಲ್ಲ'ಎಂದಿದ್ದಾರೆ.
ಮಸೀದಿ ಬಳಿ ಹನುಮಾನ್ ಚಾಲೀಸಾ ಪಠಿಸುವ ಬಗ್ಗೆ ವಿದ್ಯಾರ್ಥಿಗಳು ಮೊಂಡುವಾದ ಮಾಡುತ್ತಿದ್ದಾರೆ ಎಂದು ಎಸಿಪಿ ವಿಧುಶ್ ಸಕ್ಸೇನಾ ಹೇಳಿದ್ದಾರೆ.
ಕ್ಯಾಂಪಸ್‌ನಲ್ಲಿರುವ ಮಸೀದಿಯನ್ನು ಟೋಂಕ್ ನವಾಬ್ ವಕ್ಫ್ ಬೋರ್ಡ್‌ಗೆ ದಾನ ಮಾಡಿದ್ದರು. ಹಾಗಾಗಿ, ಭೂಮಿ ವಕ್ಫ್ ಆಸ್ತಿಯಾಗಿದೆ ಎಂದು 2018ರಲ್ಲಿ ಸಂಸ್ಥೆಗೆ ನೋಟಿಸ್ ಕಳುಹಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಿ ಕೆ ಸಿಂಗ್ ಹೇಳಿದ್ದಾರೆ. ವಾರಾಣಸಿ ನಿವಾಸಿ ವಾಸಿಂ ಅಹ್ಮದ್ ಖಾನ್ ಅವರಿಂದ ನೋಟಿಸ್ ಬಂದಿದೆ ಎಂದು ಸಿಂಗ್ ಹೇಳಿದ್ದಾರೆ.
ನೋಟಿಸ್‌ಗೆ ಉತ್ತರವಾಗಿ ಕಾಲೇಜು ಆಡಳಿತ ಮಂಡಳಿಯು, ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿದೆ. ಕಾಲೇಜಿನ ಆಸ್ತಿ ಟ್ರಸ್ಟ್‌ಗೆ ಸೇರಿದ್ದು, ಅದನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದೆ.