ತಿರುವನಂತಪುರಂ: 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳಿಗೆ ತರಗತಿಯಲ್ಲಿ ಹಾವು ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ವಿ ಶಿವನ್‍ಕುಟ್ಟಿ ತನಿಖೆಗೆ ಆದೇಶಿಸಿದ್ದಾರೆ.
ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಚಿವರು ನಿರ್ದೇಶಕರಿಗೆ ಸೂಚನೆ ನೀಡಿದರು.
ನೆಯ್ಯಾಟಿಂಕರ ಚೆಂಗಲ್ ಶಾಲೆಯ ವಿದ್ಯಾರ್ಥಿನಿ ನೆಹ್ಯಾ ಎಂಬಳಿಗೆ ನಿನ್ನೆ ಕ್ರಿಸ್‍ಮಸ್ ಆಚರಣೆ ವೇಳೆ ತರಗತಿಯಲ್ಲಿ ಹಾವು ಕಚ್ಚಿತ್ತು. ನಂತರ ಮಗುವನ್ನು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಾಲಕಿ ಈಗ ವೈದ್ಯರ ನಿಗಾದಲ್ಲಿದ್ದಾಳೆ.
ಇದೇ ವೇಳೆ ನೇಹಾಗೆ ಬೇರೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.